ಕೊಪ್ಪಳ: ಕಲ್ಲು ಕ್ವಾರಿಯಲ್ಲಿ ಸ್ಪೋಟ ಮಾಡಯವುದಕ್ಕೆ ವಿರೋಧವಿದ್ದರು ಬ್ಲಾಸ್ ಮಾಡಿರೋ ಘಟನೆ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ನಡೆದಿದೆ. ಇದರ ಪರಿಣಾಮ ಕೆಲವು ರೈತರಿಗೆ ಗಾಯಗಳಾಗಿವೆ.
ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್ ಮಾಡುವ ಮುನ್ನ ಸುತ್ತಮುತ್ತಲಿನ ಜನಕ್ಕೆ ಯಾವುದೇ ಮಾಹಿತಿ ನೀಡಿರುವಂತಿಲ್ಲ. ಹೀಗಾಗಿಯೇ ರೈತರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಕ್ವಾರಿಯಲ್ಲಿ ಬ್ಲಾಸ್ಟ್ ಆದ ತಕ್ಷಣ ಕಲ್ಲುಗಳು ಹಾರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೂ ಬಿದ್ದಿದೆ.
ಕ್ವಾರಿಯಲ್ಲಿ ಬ್ಲಾಸ್ಟ್ ಮಾಡುವುದನ್ನ ಸ್ಥಳೀಯ ರೈತರು ಕೂಡ ವಿರೋಧಿಸಿದ್ದರು. ಆದ್ರೆ ರೈತರ ಮಾತಿಗೆ ಕ್ಯಾರೆ ಎನ್ನದೆ ಬ್ಲಾಸ್ಟ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಬ್ಲಾಸ್ಟ್ ಆಗಿದ್ದನ್ನ ಮೊಬೈಲ್ ನಲ್ಲಿ ಸೆರೆ ಹಿಡೊಯುವಾಗಲೂ ಕೆಲವು ರೈತರಿಗೆ ಗಾಯವಾಗಿದೆ.
ಈ ಸಂಬಂಧ ಪೊಲೀಸ್ ಠಾಣೆ ಎದುರು ಜಮಾಯಿಸಿದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟ್ ಮಾಡದಂತೆ ತಡೆಯಿರಿ ಎಂದು ರೈತರು ಒತ್ತಾಯಿಸಿದ್ದಾರೆ.