ಚಿತ್ರದುರ್ಗ, (ಜ.21): ನಾಡಿನ ಪ್ರಸಿದ್ದ ಕಾದಬಂರಿಕಾರ, ಸಿನಿಮಾ ಸಂಭಾಷಣೆಕಾರರೂ ಆಗಿರುವ ಲೇಖಕ ಡಾ.ಬಿ.ಎಲ್.ವೇಣು ಅವರ `ದುರ್ಗದ ಬೇಡರ್ದಂಗೆ’ ಚಾರಿತ್ರಿಕ ಕಾದಂಬರಿ ಬಿಡುಗಡೆ ಸಮಾರಂಭ ಜ.24ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಜರುಗಲಿದೆ.
ಸೃಷ್ಠಿಸಾಗರ ಪ್ರಕಾಶನವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇತಿಹಾಸ ಸಂಶೋಧಕ ಡಾ.ಬಿ.ನಂಜುಂಡ ಸ್ವಾಮಿ ಸಮಾರಂಭದ ಅಧ್ಯಕ್ಷತೆಯನ್ನುವಹಿಸಲಿದ್ದು, ವಿಮರ್ಶಕ ಡಾ.ಜಿ.ವಿ.ಆನಂದಮೂರ್ತಿ ಕೃತಿ ಕುರಿತು ಮಾತನಾಡಲಿದ್ದಾರೆ.
ಮುಖ್ಯ ಅಥಿತಿಗಳಾಗಿ ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಆಗಮಿಸಲಿದ್ದು, ಲೇಖಕ ಡಾ.ಬಿ.ಎಲ್.ವೇಣು, ಸೃಷ್ಠಿಸಾಗರ ಪ್ರಕಾಶನದ ಮುಖ್ಯಸ್ಥ ಮೇಘ ಗಂಗಾಧರ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕ್ರಿ.ಶ.1849ರಲ್ಲಿ ಬ್ರಿಟೀಷರ ವಿರುದ್ದ ದುರ್ಗದ ಏಳು ಜನ ಬೇಡರ ಹುಡುಗರ ದಂಡು ಕಟ್ಟಿ ನಡೆಸಿದ ಸಂಗ್ರಾಮವೇ ಭಾರತದಲ್ಲಿ ಪ್ರಪಥಮವಾಗಿ ಘಟಿಸಿದ ಹೋರಾಟವೆಂದು ತಮಗೆ ದೊರೆತ ಐತಿಹಾಸಿಕ ಮಾಹಿತಿಗಳಿಂದ `ದುರ್ಗದ ಬೇಡರ ದಂಗೆ’ ಕೃತಿಯಲ್ಲಿ ಬಿ.ಎಲ್.ವೇಣು ಅವರು ಪ್ರತಿಪಾದಿಸಿದ್ದಾರೆ.