ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ. 04 : ಪಂಚ ರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಇಂದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿಯವರು ತಿಳಿಸಿದರು.
ಪಂಚ ರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪಟಾಕಿ ಸಿಡಿಸಿ ಕಾರ್ಯಕರ್ತರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿಯವರು, ಪಂಚ ರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಅದರಲ್ಲಿ ಮಧ್ಯ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಚವಾಣ್ಣರವರು ಈ ಬಾರಿ ಅತಿ ಹೆಚ್ಚಿನ ಸೀಟುಗಳನ್ನು ಗೆಲುವುದರ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ತಂದಿದ್ದಾರೆ.
ಛತ್ತಿಸ್‍ಗಢ ರಾಜಾಸ್ಥಾನದಲ್ಲಿಯೂ ಸಹಾ ಬಿಜೆಪಿ ಜಯ ಭೇರಿಯನ್ನು ಸಾಧಿಸಿದೆ. ಮೋದಿಯವರ ನೇತೃತ್ವದಲ್ಲಿ ಜಯವನ್ನು ಗಳಿಸಲಾಗಿದೆ. ಇದು ಪ್ರಪಂಚದ ಮುಂದುವರೆದ ರಾಷ್ಟ್ರಗಳು ಭಾರತ ಮುಂದಿನ ದಿನಮಾನದಲ್ಲಿ ಅರ್ಥಿಕವಾಗಿ ಅಭೀವೃದ್ದಿಯಾಗುತ್ತದೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಇದರಿಂದ ನಮ್ಮ ದೇಶದಲ್ಲಿ ಭಂಡವಾಳವನ್ನು ಹೊಡುವವರಿಗೆ ಆಕರ್ಷಣೆಯಾಗಿದೆ. ಮೋದಿಯವರು ದೇಶದ ಅಭೀವೃದ್ದಿಯ ಹರಿಕಾರಎಉ ದೇಶ ಪ್ರೇಮಿಯಾಗಿದ್ದಾರೆ ಎಂದು ಪ್ರಪಂಚದಲ್ಲಿ ಸಾಬೀತಾಗಿದೆ ಎಂದರು.
ಕಾಂಗ್ರೇಸ್‍ನವರು ಕರ್ನಾಟಕದಲ್ಲಿ ನೀಡಿದಂತೆ ಅಲ್ಲಿಯೂ ಸಹಾ ಗ್ಯಾರೆಂಟಿಗಳನ್ನು ನೀಡಿದ ಆದರೂ ಸಹಾ ಅಲ್ಲಿನ ಮತದಾರರು ಅದನ್ನು ತಿರಸ್ಕಾರ ಮಾಡುವುದರ ಮೂಲಕ ಮೋದಿಯವರ ಸ್ವಚ್ಚವಾದ ಆಡಳಿತವನ್ನು ನೋಡಿ ಮತವನ್ನು ನೀಡಿದ್ದಾರೆ.
ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯ ಬೇರಿಯನ್ನು ಸಾಧಿಸಿದ್ದನ್ನು ನೋಡಿದರೆ ಮುಂದಿನ ಲೋಕಸಭಾ ಚುನವಾಣೆಯಲ್ಲಿ ಬಿಜೆಪಿ ಮತ್ತು ಎನ್‍ಡಿ.ಎ. 400 ಸ್ಥಾನಗಳನ್ನು ಗೆಲ್ಲುವುದರಲ್ಲಿ ಆಶ್ಚರ್ಯ ಇಲ್ಲ ಮತ್ತೆ ಮೋದಿಯವರೆ ದೇಶದ ಪ್ರಧಾನ ಮಂತ್ರಿಗಳಾಗಲಿದ್ದಾರೆ.
ಪ್ರಪಂಚದಲ್ಲಿ ಭಾರತವನ್ನು ಬಲಿಷ್ಠ ದೇಶವನ್ನಾಗಿ ಮಾಡಲಾಗುವುದು ಅಲ್ಲದೆ ಆರ್ಥಿಕವಾಗಿಯೂ ಸಹಾ ದೇಶವನ್ನು ಸದೃಢವಾಗಿ ಮಾಡಲಾಗುವುದು ಇದು ದಿಕ್ಸೂಚಿಯಾಗಲಿದೆ ಎಂದ ತಿಪ್ಪಾರೆಡ್ಡಿಯವರು, ಈ ಮೂರು ರಾಜ್ಯದಲ್ಲಿ ಶೇ.48 ರಷ್ಟು ಮತವನ್ನು ನೀಡಿದ್ದಾರೆ.
ಮೋದಿಯವರನ್ನು ಪ್ರಪಂಚದ ನಾಯಕ ಎಂದು ಅಲ್ಲಿನ ಮತದಾರರು ತೋರಿಸಿದ್ದಾರೆ. ಇದು ಬಿಜೆಪಿ ವಿಜಯೋತ್ಸವವಲ್ಲ ಮನೆ ಮನೆಗಳಲ್ಲಿಯ ಸಹಾ ವಿಜಯೋತ್ಸವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ ಎ ಮುರಳಿ, ನಗರ ಅದ್ಯಕ್ಷರಾದ ನವೀನ್ ಚಾಲುಕ್ಯ, ಮಾಜಿ ಜಿಲಾದ್ಯಕ್ಷರಾದ ನರೇಂದ್ರನಾಥ್, ಎಸ್‍ಆರ್ ಗಿರೀಶ್, ಸಂಪತ್ ಕುಮಾರ್, ಡಿ, ಕೆ ,ಜಯ್ಯಣ್ಣ ,ಶಿವಣ್ಣಚಾರ್ ,ಭಾರ್ಗವೀ, ದಗ್ಗೆ ಶಿವಪ್ರಕಾಶ, ನಾಗರಾಜ ಬೇದ್ರೆ, ನಂದಿ ನಾಗರಾಜ, ಚಂದ್ರು, ತಿಪ್ಪೇಸ್ವಾಮಿ,, ದ್ರಾವೀಡ್ ರೇಖಾ, ಬಸಮ್ಮ ,ತಿಮ್ಮಣ್ಣ, ಶಾಂತಮ್ಮ, ಶಂಭು, ಕೃಷ್ಣ, ಯಶವಂತ್, ಪ್ರಶಾಂತ್ , ಚಂದ್ರಕಾ ಲೋಕನಾಥ್, ಕವನ ಶ್ಯಾಮಲಾ ಶಿವಪ್ರಕಾಶ್ ವೀಣಾ, ಅರುಣಾ ಪ್ರಸನ್ನ, ಕಮಲೇಶ ಅನೂಸುಯಮ್ಮ ಸೇರಿದಂತೆ ಪಧಾದಿಕಾರಿಗಳು ಉಪಸ್ಥಿತಿ ಇದ್ದರು.