ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿಯನ್ನು ಸ್ಟ್ರಾಂಗ್ ಆಗಿ ಕಟ್ಟಿದ್ದೆ ಬಿ ಎಸ್ ಯಡಿಯೂರಪ್ಪ. ಆದ್ರೆ ಈಗ ಅವರನ್ನೇ ಪಕ್ಷದಿಂದ ಮೂಲೆಗುಂಪು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕದಲ್ಲಿ ಬಿಎಸ್ವೈ ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ನಷ್ಟ ಎಂಬುದು ಗೊತ್ತಿರುವ ವಿಚಾರ. ಆದ್ರೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡಿದ್ದಾರೆ.
ಸಿಎಂ ಸ್ಥಾನದಿಂದ ಅರ್ಧಕ್ಕೆ ಇಳಿದ ಬಳಿಕ ಯಡಿಯೂರಪ್ಪ ಅವರಗೆ ಪಕ್ಷದಿಂದ ಕೆಲವೊಂದಿಷ್ಟು ಬೇಸರದ ಸಂಗತಿಗಳು ಎದುರಾದರೂ ಸಹ ಜಿಲ್ಲೆ ಜಿಲ್ಲೆಗೆ ತೆರಳಿ ಪಕ್ಷ ಸಂಘಟನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ತಮ್ಮ ಚುನಾವಣೆ ಸ್ಪರ್ಧೆಯ ಬಗ್ಗೆ ಮಾತನಾಡಿದ ಬಿಎಸ್ವೈ, ಈಗಾಗಲೇ ನನಗೆ 79 ವರ್ಷ ವಯಸ್ಸಾಗಿದೆ. ವಯಸ್ಸಿನ ಕಾರಣದಿಂದಾನೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದಿದ್ದಾರೆ.
ಇನ್ನು ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗಿಯಾಗುತ್ತೇನೆ. ರಾಜ್ಯದ ಉದ್ಧಗಲಕ್ಕೂ ಪ್ರವಾಸ ಮಾಡಿ, ಪಕ್ಷವನ್ನೂ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ಈಗಾಗಲೇ ರಾಘವೇಂದ್ರ ಸಂಸದರಾಗಿದ್ದಾರೆ, ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಇನ್ನೂ ಯುವಕರಿದ್ದಾರೆ. ಹೀಗಾಗಿ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ ಎಂದಿದ್ದಾರೆ.