ಭಾನು ಮುಷ್ತಾಕ ದಸರಾ ಉದ್ಘಾಟನೆಗೆ ಬಿಜೆಪಿಗರ ವಿರೋಧ : ಕಾಂಗ್ರೆಸ್ ನಾಯಕರು ಏನಂದ್ರು..?

1 Min Read

ಬೆಂಗಳೂರು: 2025ರ ದಸರಾ ಉದ್ಘಾಟನೆಯನ್ನು ಈ ಬಾರಿ ಬೂಕರ್ ಪ್ರಶ್ಸ್ತಿ ವಿಜೇತೆ ಭಾನು ಮುಷ್ತಾಕ ಅವರು ನೆರವೇರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇದನ್ನ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಆದರೆ ಭಾನು ಮುಷ್ತಾಕ ಅವರು ಉದ್ಘಾಟನೆ ಮಾಡ್ತಿರೋದಕ್ಕೆ ಬಿಜೆಪಿ ನಾಯಕರ ವಿರೋಧವಿದೆ. ಅದರ ಪರವಾಗಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ.

ಈ ಸಂಬಂಧ ರಾಮಲಿಂಗಾ ರೆಡ್ಡಿ ಮಾತನಾಡಿ, ಅಬ್ದುಲ್‌ ಕಲಾಂ ಈ ದೇಶದ ರಾಷ್ಟ್ರಪತಿಯಾದ್ರಲ್ಲ ಆಗಬಹುದಾ..? ಅವರು ಆಗಬಹುದಾದರೆ ಭಾನು ಮುಷ್ತಾಕ ಅವರು ಮಾಡೋದ್ರಲ್ಲಿ ತಪ್ಪೇನಿದೆ. ಅವರು ಇದೇ ಮಣ್ಣಲ್ಲಿ ಹುಟ್ಟಿದ್ದಾರೆ. ಅವರ ಧರ್ಮವನ್ನು ಸೇರಿಸಿ ನಮ್ಮ ಧರ್ಮವನ್ನು ಸಮಾನವಾಗಿ ನೋಡುವಂತವರು ಎಂದಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾತನಾಡಿ, ಹಿಂದೆಲ್ಲಾ ಮಾಡಿಲ್ವಾ. ನಿಸಾರ್ ಅಹ್ಮದ್ ಅವರು ಮಾಡಿರ್ಲಿಲ್ವಾ. ನಮ್ಮ ರಾಜ್ಯಕ್ಕೆ, ನಮ್ಮ ಸಂಸ್ಥಾನಕ್ಕೆ ದಿವಾನರಾಗಿದ್ದವರು ಯಾರು ಸರ್ ಮಿರ್ಜಾ ಇಸ್ಮಯಿಲ್ ಅವರು. ನಾವೂ ಈ ನಾಡ ಹಬ್ಬಕ್ಕೆ ಯಾವ ಜಾತಿ, ಧರ್ಮವನ್ನ ನೋಡುವುದಿಲ್ಲ. ಈ ಬೆಳವಣಿಗೆ ಏನಿದು ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್ ಸಿ ಮಹದೇವಪ್ಪ ಮಾತನಾಡಿ, ಎಲ್ಲಾ ಧರ್ಮದವರಿಗೂ ಸ್ವಾತಂತ್ರ್ಯ ಬೇಕು. ಸರ್ವಧರ್ಮಗಳ ಸಮಾನತೆ ಇರಬೇಕು ಅಂತಾನೇ ತಾನೇ ಸಂವಿಧಾನ ತಿಳಿಸುವುದು. ಇಲ್ಲಿ ಸಂವಿಧಾನ ಪರಮೋಚ್ಛವೇ ಹೊರತು. ಇನ್ಯಾವುದೋ ಪರಮೋಚ್ಛತೆ ಇಲ್ಲ. ಇದು ಧರ್ಮದ ಆಚರಣೆ ಅಲ್ಲ. ಧರ್ಮಗಳ ಬಗ್ಗೆ ಚರ್ಚೆ ಮಾಡುವುದು ರಾಜಕೀಯ ಪಕ್ಷಗಳ ವ್ಯಾಪ್ತಿಗೆ ಬರೋದು ಇಲ್ಲ. ಅದು ಸಂವಿಧಾನ ಮತ್ತು ಜನರ ವಿವೇಚನೆಯ ಆಯ್ಕೆಗೆ ಬಿಟ್ಟ ವಿಚಾರ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *