ಮೈಸೂರು: ಸಚಿವ ಸ್ಥಾನ, ಸಂಪುಟ ವಿಸ್ತರಣೆ ಸೇರಿ, ಪಕ್ಷ ಸಂಘಟನೆ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯ ಉಪಅಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯಾಧ್ಯಕ್ಷರು, ಹಿರಿಯ ನಾಯಕರು ಸೇರಿ ನನಗೆ ರಾಜ್ಯ ಉಪಾಧ್ಯಕ್ಷರ ಸ್ಥಾನ ಕೊಟ್ಟಿದ್ದಾರೆ. ಕೊಟ್ಟಿರುವಂತ ಸ್ಥಾನ ಉಪಯೋಗಿಸಿಕೊಂಡು ಎಷ್ಟು ಕೆಲಸ ಮಾಡ್ತೀವಿ ಅನ್ನೋದು ಮುಖ್ಯ. ಮುಂದೆ ಏನಾಗಬೇಕು ಎಂಬಹದನ್ನು ನಾಯಕರು ತೀರ್ಮಾನ ಮಾಡುತ್ತಾರೆ. ಒಂದಂತು ನಿಶ್ಚಿತ ನಾನು ಕೂಡ ಹಲವಾರು ಬಾರಿ ಹೇಳಿದ್ದೇನೆ. ಬೇರೆ ಬೇರೆ ಕಾರಣದಿಂದ, ಹಳೇ ಮೈಸೂರು ಭಾಗದ ಕಡೆಗೆ ಬರಲು ನನಗೂ ಆಗಿಲ್ಲ.
ಒಂದಂತು ಸ್ಪಷ್ಟ. ನಮ್ಮ ಕಾರ್ಯಕರ್ತರ ಜೊತೆ ಸೇರಿ ಈ ಭಾಗದಲ್ಲಿ ಹೆಚ್ಚೆಚ್ಚು ಕೆಲಸ ಮಾಡುತ್ತೇನೆ. ಕಾರ್ಯಕರ್ತರು ಕೂಡ ಆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಂತೆ ನಾನು ಕೂಡ ಕೆಲಸ ಮಾಡಿ ತೋರಿಸುತ್ತೇನೆ. ರಾಜ್ಯಾದ್ಯಂತ ಪ್ರವಾಸವನ್ನು ಮಾಡುತ್ತೇನೆ. ಹಳೇ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡುತ್ತೇನೆ ಎಂದಿದ್ದಾರೆ.
55-60 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಆತುರದಲ್ಲಿದ್ದಾರೆ. ವಿರೋಧ ಪಕ್ಷದವರಾಗಿ ಈ ರೀತಿ ಮಾಡುವುದು ಸಹಜ. ಆದರೆ ಇಲ್ಲಸಲ್ಲದ ಆರೋಪ ಮಾಡಿಕೊಂಡು ಇರಬಾರದು. ಬಿಜೆಪಿಗೆ ಒಂದು ಸ್ಪಷ್ಟನೆ ಇದೆ. ಕೇಂದ್ರದಲ್ಲಿ ಮೋದಿಜಿ ಕೊಟ್ಟಂತ ಜನಪರ ಕಾರ್ಯಗಳು, ಯಡಿಯೂರಪ್ಪನವರು ಕೊಟ್ಟಂತ ಕಾರ್ಯಕ್ರಮಗಳು, ಬೊಮ್ಮಾಯಿ ಅವರು ಕೊಟ್ಟಂತ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಬಿಜೆಪಿ ಮತ್ತೊಮ್ನೆ ಅಧಿಕಾರಕ್ಕರ ತರುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.