ಬಿಜೆಪಿಯ ಪ್ರಯತ್ನ ಯಶಸ್ಸಾಗಲ್ವ..? ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರೋದು ಪಕ್ಕನಾ..?

suddionenews
1 Min Read

 

 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ನಾಯಕರು ವಲಸೆ ಹೋಗ್ತಾರೆ ಅನ್ನೋದೇ ಬಾರೀ ಚರ್ಚೆವೆ ಗ್ರಾಸವಾಗಿದೆ. ಅದರಲ್ಲೂ ಬಿಜೆಪಿಗೆ ಬಂದು ಘಟಾನುಘಟಿ ಎನಿಸಿಕೊಂಡವರು ಮರಳುತ್ತಾರೆ ಎಂಬುದೇ ಬಿಜೆಪಿಗೆ ಹೆಚ್ಚಿನ ತಲೆನೋವಾಗಿದೆ. ಇರುವ ನಾಯಕರನ್ನು ಉಳಿಸಿಕೊಳ್ಳಲು ಬಿಜೆಪಿ ಕೂಡ ಸಾಕಷ್ಟು ಪ್ರಯತ್ನ ಪಡ್ತಾ ಇದೆ. ಅದರಲ್ಲೂ ಎಸ್ ಟಿ ಸೋಮಶೇಖರ್ ಅವರನ್ನ ತಮ್ಮ ಪಕ್ಷದಲ್ಲಿಯೇ ಉಳಿಸಿಕೊಳ್ಳಲು, ಅಸಮಾಧಾನ ಹೊರಹಾಕಿದ್ದಂತವರನ್ನೇ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಇದರ‌ ಬೆನ್ನಲ್ಲೆ ಮತ್ತೊಂದು ಶಾಕಿಂಗ್ ಬೆಳವಣಿಗೆ ನಡೆದಿದೆ. ಎಸ್ ಟಿ ಸೋಮಶೇಖರ್, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಿದ್ದಾರೆ.

ಎಸ್ ಟಿ ಸೋಮಶೆಖರ್ ಇಂದು ಸರ್ಕಾರಿ‌ ನಿವಾಸಕ್ಕೆ ಭೇಟಿ ನೀಡಿ, ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿದ್ದಾರೆ. ಅದು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಈ ದಿಡೀರ್ ಭೇಟಿ ಹಾಗೂ ಚರ್ಚೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಮುನ್ಸೂಚನೆಯ ಇದು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ಎಸ್ ಟಿ ಸೋಮಶೇಖರ್ ಸದ್ಯ ತಮ್ಮ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿಗಳ ಬಗ್ಗೆ ಸಿಎಂ ಬಳಿ ಚರ್ಚಿಸಿದ್ದಾರೆ. ಅದರ ಜೊತೆಗೆ ಪ್ರಸ್ತುತ ರಾಜಕೀಯದ ವಿಚಾರವನ್ನು ಚರ್ಚಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಆಪರೇಷನ್ ಹಸ್ತದ ಆರೋಪಗಳು ಕೇಳಿ ಬಂದಿವೆ. ಕಾಂಗ್ರೆಸ್ ನವರು ಲೋಕಸಭಾ ಚುಮಾವಣೆಯಲ್ಲಿ ಗೆಲ್ಲುವುದಕ್ಕೆ ನಮ್ಮವರನ್ನು ಸೆಳೆಯುತ್ತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿದೆ. ಇದರ ನಡುವೆಯೇ ಇಂತಹ ಬೆಳವಣಿಗೆಗಳು ನಡೆಯುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *