ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಅನರ್ಹತೆಗೆ ಬಿಜೆಪಿ ನಿರ್ಧಾರ : ವಿಜಯೇಂದ್ರ ಹೇಳಿದ್ದೇನು..? ಸೋಮಶೇಖರ್‌ ಪ್ರತಿಕ್ರಿಯೆ ಏನು..?

1 Min Read

 

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಹೆಚ್ಚಿನ ಸಮಯವನ್ನು ಕಾಂಗ್ರೆಸ್ ನಾಯಕರ ಜೊತೆಯಲ್ಲಿಯೇ ಕಳೆಯುತ್ತಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದಿಂದ ಅಮಾನತು ಮಾಡಬೇಕೆಂದು ಒತ್ತಾಯ ಕೇಳಿ ಬರುತ್ತಿದೆ. ಈಗಾಗಲೇ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಉಚ್ಛಾಟನೆ ಮಾಡುವ ಸಂಬಂಧ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಹಲವು ತಿಂಗಳಿನಿಂದ ಕೆಲವು ಮುಖಂಡರ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ವುಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೇಂದ್ರದ ವರಿಷ್ಠರಿಗೆ ಮನವಿ ಮಾಡಲಾಗಿದೆ. ಬಿಜೆಪಿ ಚಿಹ್ನೆಯಡಿ ಗೆದ್ದು ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಕಳೆದ ಹಲವು ತಿಂಗಳಿನಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲು ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೊತೆಗೆ ಅಧಿಕೃತವಾಗಿ ತಮ್ಮನ್ನು ತಾವೂ ಗುರಿತಿಸಿಕೊಂಡಿದ್ದಾರೆ. ಈ ವಿಚಾರವನ್ನು ಬಹಳ ಹಿಂದೆಯೇ ಚರ್ಚೆ ಮಾಡಲಾಗಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕಲು ಹಾಗೂ ಬಿಗಿಯಾದ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸರ್ವಾನುಮತದಿಂದ ಕೋರಿದೆ ಎಂದಿದ್ದಾರೆ.

ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿದ ಎಸ್.ಟಿ.ಸೋಮಶೇಖರ್, ‘ಸಂತೋಷವಾಗಿ ಸ್ವಾಗತ ಮಾಡ್ತಾ ಇದ್ದೀನಿ. ನಾನು ಹೆಬ್ಬಾರ್.. ನಾನು ಒಂದು ಕ್ಷೇತ್ರದ ಶಾಸಕ. ಅವನು ಒಂದು ಕ್ಷೇತ್ರದ ಶಾಸಕ. ಇವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದಕ್ಕೆ ಹೊರಟಿದ್ದಾರೆ. ಪಕ್ಷಕ್ಕೆ ಡ್ಯಾಮೇಜ್ ಮಾಡುವಂತವರೆ ಇಡೀ ರಾಜ್ಯಕ್ಕೆ ಯಾರೂ ಡ್ಯಾಮೇಜ್ ಮಾಡ್ತಾ ಇದಾರೆ ಎಂಬುದಾಗಿ ನೋಡ್ತಾ ಇದಾರೆ. ನಾವೂ ಯಾವತ್ತಿಗೂ ಪಕ್ಷಕ್ಕಾಗಲೀ, ಅಧ್ಯಕ್ಷರಿಗಾಗಲಿ ಡ್ಯಾಮೇಜ್ ಮಾಡುವುದಕ್ಕೆ ಹೋಗಿಲ್ಲ. ಅಮಾನತು ಮಾಡಿದ್ರು ಅಲಿಗೇಷನ್ ಮಾಡಲ್ಲ.. ತೆಗೆದು ಹಾಕಿದ್ರು ಅಲಿಗೇಷನ್ ಮಾಡಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *