ಚಿತ್ರದುರ್ಗಕ್ಕೆ ಆಗಮಿಸಿದ ಬಿಜೆಪಿಯ ಭೀಮನ ಹೆಜ್ಜೆ ನೂರರ ಸಂಭ್ರಮ ರಥಯಾತ್ರೆ

4 Min Read

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 12 : ಕಾಂಗ್ರೆಸ್ ಪಕ್ಷ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಅವರ ಜೀವಿತಾವಾಧಿ ಹಾಗೂ ಅಂತಿಮ ಸಮಯದಲ್ಲೂ ಸಹಾ ಅವರಿಗೆ ಅನ್ಯಾಯವನ್ನು ಮಾಡುತ್ತಲೇ ಬಂದಿದೆ. ಇದು ನಮ್ಮ ಸಮುದಾಯವರಿಗೆ ತಿಳಿಯಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಸಂಸದರಾಧ ಗೋವಿಂದ ಕಾರಜೋಳ ತಿಳಿಸಿದರು.

ಡಾ. ಬಿಆರ್ ಅಂಬೇಡ್ಕರ್‌ರವರು 1925 ರ ಏಪ್ರಿಲ್ 10 ಮತ್ತು 11ರಂದು ದಲಿತರ ಉದ್ಧಾರಕ್ಕಾಗಿ ಹಮ್ಮಿ ಕೊಂಡಿದ್ದ ಬಹಿಷ್ಕೃತ ಹಿತ ಕಾರ್ಯಕಾರಿಣಿ ಸಭೆಯ ನೂರು ವರ್ಷದ ಸವಿ ನೆನಪಿಗಾಗಿ ಬಿಜೆಪಿವತಿಯಿಂದ ಹಮ್ಮಿಕೊಂಡಿದ್ದ ಭೀಮನ ಹೆಜ್ಜೆ ನೂರರ ಸಂಭ್ರಮ ರಥಯಾತ್ರೆಯೂ ಶುಕ್ರವಾರ ರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿದಾಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ರವರು ಮಹಾತ್ಮ ಗಾಂಧಿಜೀಯವರು ಬೆಳಗಾವಿಗೆ ಬಂದಿದ್ದರು ಎಂದು ಅದರ ಅಂಗವಾಗಿ 100 ವರ್ಷವಾಗಿದೆ ಎಂದು ಜನರ ತೆರಿಗೆ ಹಣದಲ್ಲಿ ಕಾಂಗ್ರೇಸ್ ಪಕ್ಷದ ಸಮಾರಂಭವನ್ನು ಅದ್ದೂರಿಯಾಗಿ ಮಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೆನಪು ಬರಲಿಲ್ಲ, ಆದರೆ ಬಾಬಾ ಸಾಹೇಬ್ ರವರ ಹೆಸರಿನಲ್ಲಿ ಮತಗಳು ಬೇಕು ಆದರೆ ಸ್ಮರಣೆ ಮಾಡುವಂತ ಕಾರ್ಯ ಮಾತ್ರ ಬೇಡವಾಗಿದೆ. 1952ರ ನಡೆದ ದೇಶದ ಪ್ರಥಮ ಚುನಾವಣೆಯಲ್ಲಿ ಅಂಬೇಡ್ಕರ್‌ರವರು ಸ್ಪರ್ದೆ ಮಾಡಿದ್ದರು ಆದರೆ ಇವರನ್ನು ಸೋಲಿಸಿದವರು ಪಂಡಿತ್ ಜವಾಹರಲಾಲ್ ನೆಹರು ರವರು ಇದೇ ರೀತಿ ಎರಡನೇ ಚುನಾವಣೆಯಲ್ಲಿಯೂ ಸಹಾ ಜವಾಹರಲಾಲ್ ನೆಹರುರವರು ಅಂಬೇಡ್ಕರ್ ರವರನ್ನು ಸೋಲಿಸಿದ ಕೀರ್ತೀ ಅವರಿಗೆ ಸಲ್ಲುತ್ತದೆ ಇದರ ಸಂಭ್ರಮವನ್ನು ಕಾಂಗ್ರೆಸ್ ಆಚರಣೆ ಮಾಡಿದೆ ಎಂದರು.

ಜವಾಹರಲಾಲ್ ನೆಹರುರವರ ಹೆಸರಿನಲ್ಲಿ ಪಂಡಿತ್ ಇತ್ತು ಆದರೆ ಪಾಂಡಿತ್ಯ ಇರಲ್ಲಿಲ್ಲ ಪಾಂಡಿತ್ಯ ಇದ್ದದು ಅಂಬೇಡ್ಕರ್‌ರವರಲ್ಲಿ ಈ ಭಯದಿಂದ ಅಂಬೇಡ್ಕರ್‌ರವರನ್ನು ಲೋಕಸಭೆಗೆ ಆಯ್ಕೆಯಾಗಲು ಕಾಂಗ್ರೆಸ್ ಕುತಂತ್ರದಿಂದ ಬಿಡಲಿಲ್ಲ, ಅವರಿಗೆ ಸರಿಯಾದ ರೀತಿಯ ಖಾತೆಯನ್ನು ಅಂದಿನ ಕಾಂಗ್ರೆಸ್ ಪಕ್ಷ ನೀಡದೇ ಯಾವುದೋ ಒಂದು ಕಿತ್ತು ಹೋದ ಖಾತೆಯನ್ನು ನೀಡಿ ಅವಮಾನ ಮಾಡಿದರು. ಜವಾಹರಲಾಲ್ ನೆಹರುರವರು ಅಂಬೇಡ್ಕರ್ ರವರ ತಮ್ಮ ಖಾತೆಯಿಂದ ರಾಜೀನಾಮೆಯನ್ನು ನಿಡುವಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವರು ನೆಹರು ರವರು, ಹೆಜ್ಜೆ ಹೆಜ್ಜೆಗೂ ಸಹಾ ಅವರನ್ನು ಆವಮಾನ ಮಾಡಿದರು. ದೇಶದ ಜನರಿಗಾಗಿ ತಮ್ಮ ಜೀವನವನ್ನು ನೀಡಿದರು. ಸಂವಿಧಾನ ಇರುವುದರಿಂದಲೇ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತೆಂದು ದೇಶದ ಪ್ರಧಾನ ಮಂತ್ರಿ ನರೆಂದ್ರ ಮೋದಿ ತಿಳಿಸಿದ್ದಾರೆ ಎಂದರು.

ಪಂಡಿತ್ ಜವಾಹರಲಾಲ್ ನೆಹರು ಕುಟುಂಬದವರೆಲ್ಲಾ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡರು ಆದರೆ ದೇಶಕ್ಕಾಗಿ ಸಂವಿಧಾನವನ್ನು ನೀಡಿದಂತ ಹಾಗೂ ಬಡವರಿಗಾಗಿ ತಮ್ಮ ಜೀವನವನ್ನು ಸವೆಸಿದ ಅಂಬೇಡ್ಕರ್ ರವರಿಗೆ ಜೀವಿತ ಅವಧಿಯಲ್ಲಿ ನೀಡಲಿಲ್ಲ. ಇದನ್ನು ವಿ.ಪಿ.ಸಿಂಗ್ ರವರು ನೀಡಿದರು. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯಾಗಬೇಕೆಂದು ಕೂಗು ಬಹಳ ವರ್ಷದಿಂದ ಎದ್ದಿದೆ ಆದರೆ ಇದುವರೆವಿಗೂ ರಾಜ್ಯದ ಮುಖ್ಯಮಂತ್ರಿ ದಲಿತರಾಗಿಲ್ಲ ಖರ್ಗೆಯವರು ಮುಖ್ಯಮಂತ್ರಿಯಾಗುವ ಎಲ್ಲಾ ರೀತಿಯ ಅರ್ಹತೆ ಇದ್ದರೂ ಸಹಾ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿಯನ್ನು ಮಾಡಲಿಲ್ಲ, ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದೆ, ಇದರ ಬಗ್ಗೆ ಎಚ್ಚತ್ತಕೊಂಡು ಹೋರಾಟವನ್ನು ಮಾಡಬೇಕಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಮಾಜಿ ಸಂಸದರಾದ ಜನಾರ್ಧನ ಸ್ವಾಮಿ ಮಾತನಾಡಿ, ಇತಿಹಾಸದಲ್ಲಿ ಅಂಬೇಡ್ಕರ್ ರವರು ದೇಶ ಮಾತ್ರವಲ್ಲ ಪ್ರಪಂಚ ಕಂಡು ಅದ್ಬುತ ನಾಯಕರಾಗಿದ್ದಾರೆ. ಈ ವ್ಯಕ್ತಿಯನ್ನು ಜಗತ್ತು ಗುರುತ್ತಿಸುತ್ತಿದೆ. ಬೇರೆ ದೇಶಗಳಿಗೆ ಅಂಬೇಡ್ಕರ‍್ವ ರವರು ಮಾದರಿಯಾಗಿದ್ದಾರೆ. ವಿದೇಶದಲ್ಲಿ ಶಿಕ್ಷಣವನ್ನು ಪಡೆದು ಶೋಷಿತ ವರ್ಗಕ್ಕೆ ಮಾದರಿಯಾಗಿದ್ದಾರೆ. ದೊಡ್ಡದಾದ ಮರವಾಗಿ ಭಾರತ ದೇಶದಲ್ಲಿ ಎಲ್ಲರಿಗೂ ದಾರಿ ದೀಪವಾಗಿದ್ದಾರೆ. ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ದ್ರೋಹವನ್ನು ಮಾಡಿದೆ ಎಂಬುದರ ಬಗ್ಗೆ ಜನರಿಗೆ ಗೊತ್ತಿದೆ, ಬಿಜೆಪಿ ಜನರ ಕಲ್ಯಾಣಕ್ಕೆ ಬದ್ದವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದವರು ಕಾರ್ಯಕ್ರಮದಲ್ಲಿ ಹೆಚ್ಚಿನ ಮತ್ತು ಅಂಬೇಡ್ಕರ್ ಹೆಸರು ಬಳಸಿಕೊಳ್ಳುವ ಕಾಂಗ್ರೆಸ್ ದಲಿತರಿಗೆ ಸೂಕ್ತ ಸ್ಥಾನಮಾನ, ಅವಕಾಶ ನೀಡಿಲ್ಲ. ಅಂಬೇಡ್ಕರ್ ಅವರನ್ನೂ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಉರಿಯುವ ಮನೆಯಂತಿರುವ ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ಅಂದೇ ಅಂಬೇಡ್ಕರ್ ದಲಿತರಿಗೆ ಕಿವಿಮಾತು ಹೇಳಿದ್ದರು ಬಿಜೆಪಿ ಪಕ್ಷವು ಅಂಬೇಡ್ಕರ್ ಬಗ್ಗೆ ಅಪಾರ ಗೌರವ ಹೊಂದಿದ್ದು, ಅವರ ಆದರ್ಶ, ವಿಚಾರಗಳನ್ನು ತಿಳಿಸುವ ಪ್ರಯತ್ನವಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆ ದೇಶ, ರಾಜ್ಯದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ರಾಜ್ಯದಲ್ಲಿ 200 ಹಾಸ್ಟೆಲ್‌ಗಳು ಹಾಗೂ 100 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ ಬೆಳಗಾವಿಯಲ್ಲಿ ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದು 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಮಾವೇಶ ಏರ್ಪಡಿಸಿತ್ತು ಇದರಲ್ಲಿ ಅಂಬೇಡ್ಕರ್ ರವರ ಬಗ್ಗೆ ಯಾವ ಮಾತನ್ನು ಸಹಾ ಕಾಂಗ್ರೆಸ್ ಆಡಿಲ್ಲ, ಅಂಬೇಡ್ಕರ್ ರವರನ್ನು ಕಾಂಗ್ರೆಸ್ ಬರಿ ಮತ ಬ್ಯಾಂಕಿಗಾಗಿ ಉಪಯೋಗ ಮಾಡಿಕೊಳ್ಳುತ್ತಿದೆ ಅವರ ವಿಚಾರವನ್ನು ಜನತೆಗ ಮುಟ್ಟಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿಲ್ಲ ಎಂದು ದೂರಿದರು.

ಶಾಸಕರಾದ ಸಿಮೆಂಟ್ ಮಂಜು ಮಾತನಾಡಿ ಬಿಜೆಪಿ ಪಕ್ಷದವತಿಯಿಂದ ಅಂಬೇಡ್ಕರ್ ಅವರ ಸ್ಮಾರಕಗಳನ್ನು ನಿರ್ಮಿಸಿ ಅವರ ತತ್ವಗಳನ್ನು ಇಂದಿನ ಯುವ ಪೀಳಿಗೆಗೆ ಸಾರಲು ತೀರ್ಮಾನಿಸಿದೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅವಮಾನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಬಿಜೆಪಿ ಪಕ್ಷವು ಮುಂದಾಗಿದ್ದು ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 15 ರಂದು ನಿಪ್ಪಾಣಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ಕೋಲಾರದ ಮಾಜಿ ಸಂಸದರಾದ  ಮುನಿಸ್ವಾಮಿ ಹಾಗೂ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಉಮೇಶ್  ಕಾರಜೋಳ್ ಹಾಗೂ ಮಹೇಂದ್ರ   ಜಿಲ್ಲಾ ಅಧ್ಯಕ್ಷರಾದ ಮುರಳಿ ಎಸ್.ಸಿ.ಮೋರ್ಚಾ ಮುಖಂಡರಾದ  ದೀಪ ಶ್ರೀನಿವಾಸ್,  ಮಲ್ಲಿಕಾರ್ಜನ್, ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಗರಾಧ್ಯಕ್ಷರಾದ ಲೋಕೇಶ್ ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್, ಚಾಲುಕ್ಯ ನವೀನ್ ರಾಮದಾಸ್,  ಮುಖಂಡರಾದ ಮೋಹನ್, ವಕ್ತರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಶಂಭು, ರವಿ ಮಹಾಂತಣ್ಣ,  ಲೋಹಿತ್ ,ಭಾರ್ಗವಿ  ದ್ರಾವಿಡ್, ಶ್ರೀನಿವಾಸ್ ಮತ್ತು ಮೋಹನ್ ಉಪಸ್ಥಿತರಿದ್ದರು.

 

 

 

 

 

Share This Article
Leave a Comment

Leave a Reply

Your email address will not be published. Required fields are marked *