ಚಿತ್ರದುರ್ಗ, (ಜ.04) : ತ್ಯಾಗ, ಸೇವಾ ಮನೋಭಾವನೆಯಿಂದ ಬಂದಿರುವ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದಿಂದ ಪಾಠವನ್ನು ಕಲಿಯುವ ಅವಶ್ಯಕತೆ ಇಲ್ಲ, ಕಾರ್ಯಕ್ರಮದಲ್ಲಿ ಗೂಂಡಾಗಿರಿಯನ್ನು ಮಾಡಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಎಂ.ಎಲ್. ಸಿ. ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹನುಮಂತೇಗೌಡ ಆಗ್ರಹಿಸಿದ್ದಾರೆ.
ರಾಮನಗರದಲ್ಲಿ ನಿನ್ನೆ ನಡೆದ ಮುಖ್ಯಮಂತ್ರಿಗಳ ನೇತೃತ್ವದ ಕಾರ್ಯಕ್ರಮದಲ್ಲಿ ಗೂಂಡಾಗಿರಿಯನ್ನು ನಡೆಸಿದ ಡಿಕೆ ಸುರೇಶ್‍ರ ವಿರುದ್ದ ಬಿಜೆಪಿಯುವ ಮೋರ್ಚದವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರ ಅವರು, ಕಾಂಗ್ರೆಸ್‍ನಿಂದ ನೀತಿ ಪಾಠವನ್ನು ಬಿಜೆಪಿ ಕಲಿಯುವ ಅವಶ್ಯಕತೆ ಇಲ್ಲ, ಬಂಡೆ, ಗಂಧವನ್ನು ಸಾಗಾಟ ಮಾಡಿದ ಕಾಂಗ್ರೇಸ್‍ನಿಂದ ತ್ಯಾಗ, ಸೇವಾ ಮನೋಬಾವವನ್ನು ರೂಢಿಸಿಕೊಂಡು ಬಂದಿರುವ ಬಿಜೆಪಿ ಕಲಿಯುವ ಅಗತ್ಯ ಇಲ್ಲ ಎಂದರು.
ರಾಮನಗರವನ್ನು ಡಿಕೆಶಿ ಸಹೋದರರು ಮತ್ತು ಎಂ.ಎಲ್.ಸಿ. ರವಿಕುಮಾರ್ ರಾವಣ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಅಭೀವೃದ್ದಿಯತ್ತ ಕೊಂಡೂಯ್ಯತ್ತಿರುವ ಸಚಿವ ಅಶ್ವತ್ ನಾರಾಯಣ ವಿರುದ್ದ ಡಿಕೆಶಿ ಸಹೋದರರು ಪಿತೂರು ಮಾಡುತ್ತಿದ್ದಾರೆ.
ಇದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದಾರೆ ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಅವರು ಡಿ.ಕೆ.ಸುರೇಶ್ ಮತ್ತು ಎಂ.ಎಲ್.ಸಿ. ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ ಮಾತನಾಡಿ, ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಏಕಾಏಕಿ ಏಕ ವಚನದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ಗೂಂಡಾ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ.
ಅಂಬೇಡ್ಕರ್ ಮತ್ತು ಕೆಂಪೇಗೌಡ ರವರು ಪ್ರತಿಮರ ಅನಾವರಣ ಸಮಾರಂಭದಲ್ಲಿ ಈ ರೀತಿಯಾದ ದುರ್ವತನೆಯನ್ನು ಮಾಡಿರುವ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ. ಸಿದ್ದಾರ್ಥ, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಸಂಪತ್, ಪ್ರಧಾನ ಕಾರ್ಯದರ್ಶೀ ಕಿರಣ್, ನಗರ ಪ್ರಧಾನ ಕಾಯದರ್ಶಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಕಲ್ಲೇಶಯ್ಯ, ಎಸ್.ಸಿ.ಮೋರ್ಚಾದ ಪಾಂಡುರಂಗಪ್ಪ, ಪರಶುರಾಮ್, ನಾಗರಾಜ್ ಬೇದ್ರೇ, ಶಿವಣ್ಣಾಚಾರ್, ಸಂಪತ್, ರವಿಕುಮಾರ್ ನಗರಸಭಾ ಸದ್ಯಸರಾದ ಹರೀಶ್, ಸುರೇಶ್, ರಮೇಶ್, ಪರಮೇಶ್, ಜಿಲ್ಲಾ ಕಾರ್ಯದರ್ಶೀ ನರೇಂದ್ರ, ಗೌರಮ್ಮ, ಜಯಲಕ್ಷ್ಮಿ, ನಾಗರತ್ನ, ಜಯಶೀಲ ಸೇರಿದಂತೆ ಇತರರು ಭಾಗವಹಿಸಿದ್ದರು.