ದೆಹಲಿಯಲ್ಲಿ ಬಿಜೆಪಿ ಗೆಲುವು : ಚಿತ್ರದುರ್ಗದಲ್ಲಿ ಕಾರ್ಯಕರ್ತರ ವಿಜಯೋತ್ಸವ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 08 : ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟವಾದ ಬಹುಮತವನ್ನು ಗಳಿಸಿದ ಹಿನ್ನಲೆಯಲ್ಲಿ ಇಂದು ನಗರದ ಒನಕೆ ಓಬವ್ವ ವೃತ್ತದಲ್ಲಿ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿ ಪಟಾಕಿಯನ್ನು ಸಿಡಿಸಿ ಸಿಹಿಯನ್ನು ಹಂಚಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ,  ಕಳೆದ 10 ವರ್ಷಗಳಿಂದ ದೇಶದಲ್ಲಿ ಭ್ರಷ್ಠಾಚಾರವನ್ನು ಕಿತ್ತು ಹಾಕುತ್ತೇವೆಂದು ಪೂರಕೆಯನ್ನು ಚಿಹ್ನೆಯನ್ನು ಹಿಡಿದು ಅಧಿಕಾರಕ್ಕೆ ಬಂದ ಎಎಪಿ ಪಕ್ಷದ ಸಚಿವರೇ ಭ್ರಷ್ಠಾಚಾರದಲ್ಲಿ ಮುಳುಗಿದ ಹಿನ್ನಲೆಯಲ್ಲಿ ಅಲ್ಲಿನ ಮತದಾರರು ಎಎಪಿಯ ಆಡಳಿತವನ್ನು ಕಿತ್ತು ಹಾಕಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚು 27 ವರ್ಷಗಳ ಬಳಿಕ ಬಜೆಪಿಗೆ ಅಧಿಕಾರವನ್ನು ನೀಡಿದ್ದಾರೆ. ಎಎಪಿ ಪಾರ್ಟಿಯಲ್ಲಿನ 8 ರಿಂದ 10 ಜನ ಸಚಿವರು ಸಿಎಂ, ಡಿಸಿಎಂರವರು ಸೇರಿ ಭ್ರಷ್ಠಾಚಾರದಲ್ಲಿ ಮುಳುಗಿದ್ದಿರು, ಜೈಲು ವಾಸವನ್ನು ಅನುಭವಿಸಿದವರಿಗೆ ಅಲ್ಲಿನ ಮತದಾರರು ಅವರಿಗೆ ತಕ್ಕ ಪಾಠವನ್ನು ಚುನಾವಣೆಯ ಮೂಲಕ ಕಲಿಸಿದ್ದಾರೆ ಎಂದರು.

ಚುನಾವಣೆಯ ಸಮಯದಲ್ಲಿ ಜನತೆಯ ಭಾವನೆ ಹಾಗೂ ಭ್ರಷ್ಠಾಚಾರ, ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಎಎಪಿ ತನ್ನ ಆಡಳಿತದಲ್ಲಿ ಭ್ರಷ್ಠಾಚಾರವನ್ನು ಮಟ್ಟ ಹಾಕದೆ ಅದನ್ನು ಪೋಷಣೆ ಮಾಡುವಂತ ಕಾರ್ಯವನ್ನು ಮಾಡಿದೆ ಇದಕ್ಕೆ ತಕ್ಕ ಉತ್ತರವನ್ನು ಮತದಾರ ನೀಡಿದ್ದಾನೆ, ನರೇಂದ್ರ ಮೋದಿಯವರ ಅಡಳಿತದ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದಾರೆ, ಇದನ್ನು ಅಲ್ಲಿನ ಮತದಾರರು ಮೆಚ್ಚಿದ್ದಾರೆ. ಇದಕ್ಕೆ ಅಲ್ಲಿ ಬಿಜೆಪಿಯನ್ನು ಬಹು ಮತಗಳಿಂದ ಗೆಲ್ಲಿಸಿದ್ದಾರೆ. ಬಿಜೆಪಿ ಬರೀ ಭರವಸೆ, ಘೋಷಣೆಗಳನ್ನು ಮಾತ್ರವೇ ಹೇಳದೆ, ಅಭೀವೃದ್ದಿ ಪೂರಕವಾದ ಸರ್ಕಾರವನ್ನು ನೀಡುತ್ತದೆ. ಅಭೀವೃಧ್ದಿ ಪೂರಕವಾದ ಯೋಜನೆಗಳನ್ನು ನೀಡಲಾಗುವುದು. ಇದನ್ನು ದೇಶದ ಜನತೆ ಒಪ್ಪಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮಾಡಿದ ಪಕ್ಷಕ್ಕೆ ಅಲ್ಲಿನ ಮತದಾರರು ಸೊನ್ನೆಯನ್ನು ನೀಡಿದ್ದಾರೆ. ದೇಶದ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಹಿಡಿಯುವಲ್ಲಿ ಹಿನ್ನಡೆಯಾಗಿದೆ. ಇದರಿಂದ ಕಾಂಗ್ರೆಸ್ ದೇಶದಿಂದ ನಿರ್ಮೂಲನೆಯಾಗುವ ಸಮಯ ದೂರ ಇಲ್ಲ, ದೇಶ ಅಭೀವೃದ್ದಿಯಾಗಬೇಕಾದರೆ ಮೋದಿಯವರ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಜನತೆ ತೀರ್ಮಾನ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಸಹಾ ಬಿಜೆಪಿ ಗೆಲುವನ್ನು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಲೋಕೇಶ್ ಗ್ರಾಮಾಂತರ ಘಟಕದ ಅಧ್ಯಕ್ಷರಾದ ನಾಗರಾಜ್ ಉಪ್ಪನಾಯಕನಹಳ್ಳಿ, ಮಾಧುರಿ ಗೀರೀಶ್, ರೈತ ಮೂರ್ಚಾದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಯಾದವ್, ಶಂಭು, ಮಾಜಿ ಆಧ್ಯಕ್ಷರಾದ ನವೀನ್ ಚಾಲುಕ್ಯ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಬಸಮ್ಮ, ಛಲವಾದಿ ತಿಪ್ಪೇಸ್ವಾಮಿ, ಕಿರಣ, ಶಾಂತಮ್ಮ, ರೇಣುಕಾ, ಮಹಾಂತೇಶ್, ರಘು ಮುಂತಾದವರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *