ರಾಹುಲ್ ಗಾಂಧಿ ಪ್ರಧಾನಿಯಾಗಿಸುವುದು, ಮರಳುಗಾಡಿನಲ್ಲಿ ಮರೀಚಿಕೆ ಹಿಡಿದಂತೆ : ನಲಪಾಡ್ ಗೆ ಬಿಜೆಪಿ ಟಾಂಗ್

suddionenews
1 Min Read

 

ಬೆಂಗಳೂರು: ಇಂದು ನಲಪಾಡ್ ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡೋದೆ ನಮ್ಮ ಮುಂದಿನ ಗುರಿ ಎಂದಿದ್ದಾರೆ. ಈ ಸಂಬಂಧ ಕಿಡಿಕಾರಿರುವ ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ಅತ್ತು ಕರೆದು ಔತಣ ಮಾಡಿಸಿಕೊಂಡು ಎಂಥ ಮಾತಾಡಿಬಿಟ್ಟಿರಿ ಮಿಸ್ಟರ್ ನಲಪಾಡ್. ಮೊದಲು ಡಿಕೆಶಿ ಅವರನ್ನು ಸಿಎಂ‌ ಮಾಡೋಕೆ ಸಿದ್ದರಾಮಯ್ಯ ಅವರು ಬಿಡುತ್ತಾರೆಯೇ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಿ. ಆಮೇಲೆ ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿ.

ಅಧಿಕಾರ ಸ್ವೀಕಾರ‌ ಮಾಡಿದ ದಿನವಾದರೂ ಸ್ವಲ್ಪ ಒಳ್ಳೆಯ ಯೋಚನೆ ಮಾಡಿ. ನೀವು ಪ್ರಸ್ತಾಪ ಮಾಡಿದ ವಿಚಾರ ಕೈ ಗೂಡುವುದಿಲ್ಲ ಎಂದು ಅರ್ಥವಾಗಿ ಎಂತೆಂತವರೋ ಮೂಲೆಗುಂಪಾಗಿದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸುವುದು ಮರಳುಗಾಡಿನಲ್ಲಿ ಮರಿಚೀಕೆಯನ್ನು ಹಿಡಿದಂತೆ. ಎಂದಿಗೂ ಕೈಗೂಡದು.

48 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಕಳೆದ ನಂತರ @INCIndia ಪಕ್ಷ @DKShivakumar ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿತ್ತು. 100 ಕ್ಕೂ ಹೆಚ್ಚು ದಿನ ಪರಪ್ಪನ ಅಗ್ರಹಾರದಲ್ಲಿ ನಲಪಾಡ್ ಈ ಹಿಂದೆ ಕಳೆದಿದ್ದರು, ಅವರನ್ನು ಈಗ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ನೆನಪಿಡಿ, ಇವರಿಬ್ಬರೂ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *