ಬೆಂಗಳೂರು: ಸಿದ್ದರಾಮಯ್ಯ ಸದ್ಯ ಸ್ಪರ್ಧಿಸುವ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದರು ಕೂಡ ಇನ್ನು ಕ್ಷೇತ್ರ ಮಾತ್ರ ಫೈನಲ್ ಮಾಡಿಲ್ಲ. ಈ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ. ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿದೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ @DKShivakumar ಅವರ ಅರ್ಜಿ ಅಸ್ತ್ರಕ್ಕೆ ಹೆದರಿ, ತಮ್ಮ ಆಪ್ತರ ಮೂಲಕ ಅರ್ಜಿಹಾಕಿಸಿದ್ದಾರೆ. ಅದರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಅನ್ನೋದು ನಮೂದಾಗಿಲ್ಲ. ಅಂದರೆ,ಕಾಂಗ್ರೆಸ್ ಕರಪ್ಟ್ ಸೊಸೈಟಿಗೆ @siddaramaiah ಬ್ಲಾಂಕ್ ಚೆಕ್ ನೀಡಿದ್ದಾರೆ.ಇದು ಪಾಸೋ, ಬೌನ್ಸೋ ಅನ್ನೋದು ರಾಜ್ಯದ ಜನತೆ ಕಾದು ನೋಡಬೇಕಿದೆ.
ಸಿದ್ರಾಮಯ್ಯ ಸರ್ಕಾರ ಇದ್ದಾಗ ಬರೀ ಬರಗಾಲ. ಅವರು ನಮ್ಮ ಜನಾಂಗವನ್ನೇ ತುಳಿದರು. ವೀರಮದಕರಿ ನೆಲದಲ್ಲಿ ಹುಟ್ಟಿದ ಮಕ್ಕಳು ನಾವು. ನಮ್ಮನ್ನ ನೆಲಕ್ಕೆ ಬೀಳದಂತೆ ನೋಡಿಕೊಳ್ತಿರೋದು ಬಿಜೆಪಿ ಸರ್ಕಾರ. ಅವ್ರು ಅಹಿಂದ ಅಂತ ಅವರನ್ನೇ ಮೂಲೆಗುಂಪು ಮಾಡಿದ್ರು. ಕುಂಕುಮ ಇಟ್ಕೊಂಡ್ರೆ ಭಯ ಅಂತಾರೆ, ದರ್ಗಾಕ್ಕೆ ಹೋದಾಗ ಏನು ಆಗಲ್ವಾ? ಬರೀ ನಾಟಕ, ಓಲೈಕೆ.
ಕನಕಪುರ ಹೊರತಾಗಿ ಎಲ್ಲೂ ಪ್ರಭಾವ ಹೊಂದಿರದ ಡಿ.ಕೆ ಶಿವಕುಮಾರ್ ಎನ್ನುವ ಬಂಡೆ.. ಅಲ್ಲಲ್ಲಾ ಬಂಡೆ ಚೂರಿಗೆ ಹೆದರಿ ತಮ್ಮ ಆಪ್ತ ಕಾರ್ಯದರ್ಶಿಗಳ ಮೂಲಕ ವಿಧಾನಸಭೆಯ ಟಿಕೆಟ್ಗಾಗಿ ಅರ್ಜಿ ಹಾಕಿಸಿದ್ದಾರೆ ಎಂದರೆ, ಸಿದ್ದರಾಮಯ್ಯನವರ ಪರಿಸ್ಥಿತಿ ಹೇಗಿರಬೇಡ. ಅರ್ಜಿಯಲ್ಲಿರುವ ಕ್ಷೇತ್ರದ ಕಾಲಮ್ನಲ್ಲಿ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲೇ ಸ್ಪರ್ಧೆ ಎನ್ನುವುದನ್ನು ನಮೂದಿಸಿರುವುದನ್ನು ನೋಡಿದರೆ, ಕನಕಪುರ ಎನ್ನುವ ಜೆಲ್ಲಿ ಕಲ್ಲು ಸಿದ್ದರಾಮಯ್ಯ ಅವರ ಮುಖಕ್ಕೆ ಸರಿಯಾಗಿ ಬಿದ್ದಿದೆ ಎನ್ನುವುದು ಜರೂರಾಗಿದೆ. ಪಾಪ ಎಂತಹ ದೀನ ಸ್ಥಿತಿ ಇವರದು ಎಂದು ಬಿಜೆಪಿ ವ್ಯಂಗ್ಯವಾಡಿದೆ.