You are so lucky ಎಂದು ಹೆಚ್ಡಿಕೆಗೆ ಹೊಗಳಿಕೆ..ಮತ್ತೊಂದು ಕಡೆ ಸಿದ್ದು ಹಾಸ್ಯೋತ್ಸವದ ವ್ಯಂಗ್ಯ : ಮಾಜಿ ಸಿಎಂಗಳಿಗೆ ಬಿಜೆಪಿ ವ್ಯಂಗ್ಯ..!

ಬೆಂಗಳೂರು: ಒಂದು‌ ಕಡೆ ಕುಮಾರಸ್ವಾಮಿ ಮತ್ತೊಂದು ಕಡೆ ಸಿದ್ದರಾಮಯ್ಯ ಕುರಿತು ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಹೆಚ್ಡಿಕೆ ಟ್ವೀಟ್ ಗೆ ಬಿಜೆಪಿ ಟಕ್ಕರ್ ನೀಡಿದ್ದು, ಕುಮಾರಸ್ವಾಮಿ ಅವರೇ,‌ You are so lucky ಎಂದಿದೆ.

ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ. ಎರಡಂಕೆಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ‌ ಚೀಟಿಯ ಮೂಲಕ‌ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ. ನೀವು ಅದೃಷ್ಟವಂತರು!. ಲಕ್ಕಿಡಿಪ್‌ನಲ್ಲಿ ಗೆದ್ದರೆ ಆಳುತ್ತೇನೆ, ಸೋತರೆ ಅಳುತ್ತೇನೆ. ಲಕ್ಕಿ ಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!?. ನಾನೇ ಲಕ್ಕಿ ಡಿಪ್ ಸಿಎಂ ಹೆಚ್ಡಿಕೆ ಎಂದು ವ್ಯಂಗ್ಯ ಮಾಡಿ ಬಿಜೆಪಿ ಟ್ವೀಟ್ ಮಾಡಿದೆ.

ಇದೇ ವೇಳೆ ಸಿದ್ದರಾಮಯ್ಯ ಅವರಿಗೂ ಅಪಹಾಸ್ಯ ಮಾಡಿದೆ. ಸಿದ್ದರಾಮೋತ್ಸವ ಸಮಿತಿ ಸದಸ್ಯರ ಪಟ್ಟಿಗೆ ಬಿಜೆಪಿ ವ್ಯಂಗ್ಯವಾಡಿದ್ದು, ಸಿದ್ದರಾಮೋತ್ಸವ ಸಮಿತಿಯಲ್ಲಿ ಗೌರವಾಧ್ಯಕ್ಷರು ಸೇರಿ 62 ಸದಸ್ಯರಿದ್ದಾರೆ. ಇದೇನು ಕರ್ನಾಟದ #G23 ನಾಯಕರ ಪಟ್ಟಿಯೇ?. ಕೆಪಿಸಿಸಿ ಅಧ್ಯಕ್ಷರನ್ನು ನೇರಾನೇರ ಬೆದರಿಸಲು ಗುಂಪು ಕಟ್ಟಿಕೊಂಡಂತಿದೆ!. ಇದೇನು ಸಿದ್ದರಾಮೋತ್ಸವ ಸಮಿತಿಯೋ ಅಥವಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯೋ?. ಬಹುಶಃ ಇದು ಬಂಡಾಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಾಗಿರುವ ಸಾಧ್ಯತೆ ಇದೆ‌ ಎಂದು ವ್ಯಂಗ್ಯವಾಡಿದ್ದಾರೆ.

ಹಲವು ಜಿಲ್ಲೆಗಳ ಬೆಂಬಲಿಗರಿಂದ ಸಿದ್ದರಾಮಯ್ಯಗೆ ಸ್ಪರ್ಧೆಗೆ ಆಹ್ವಾನ ವಿಚಾರವಾಗಿ, ಟ್ವೀಟ್ ಮೂಲಕ ಸಿದ್ದರಾಮಯ್ಯ ಕಾಲೆಳೆದಿದ ಬಿಜೆಪಿ‌. ಬಾದಾಮಿ ಕ್ಷೇತ್ರಕ್ಕೆ ಓಡಾಡುವುದು ಸಿದ್ದರಾಮಯ್ಯ ಅವರಿಗೆ ಕಷ್ಟವಾಗುತ್ತದೆಯಂತೆ!. ಕೋಲಾರಕ್ಕೆ ಬನ್ನಿ ಎಂಬುದು ರಮೇಶ್ ಕುಮಾರ್ ಬಳಗದ ಆಗ್ರಹವಂತೆ!. ನಿದ್ದೆ ಮಾಡುವವನಿಗೆ ಹಾಸಿಗೆ ನೀಡಿದ ಹಾಗಿದೆ‌ ಅಹ್ವಾನಗಳು!ಎಂದು #ಸಿದ್ದುಹಾಸ್ಯೋತ್ಸವ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *