ಕೊಪ್ಪಳ: ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಬೇರೊಬ್ಬರ ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತೆ ಎಂದು ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಹೋಂ ಮಿನಿಸ್ಟರ್ ಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಕೊಲೆ ವಿಚಾರ ಅವರಿಗೆ ಗೊತ್ತಿರುತ್ತಾ..? ಅಥವಾ ಅಧಿಕಾರಿಗಳಿಗೆ ಗೊತ್ತಿರುತ್ತಾ..? ಹೋಂ ಮಿನಿಸ್ಟರ್ ಗೆ ಜ್ಞಾನ ಇದೆಯೋ ಇಲ್ಲವೋ ಎಂಬುದನ್ನು ಹುಡುಕಬೇಕಿದೆ. ಹೆಣದ ಮೇಲೆ ರಾಜಕೀಯ ಮಾಡುವುದನ್ನು ಬಿಜೆಪಿಗರು ಸಮರ್ಥಿಸಿಕೊಳ್ಳುತ್ತಾರೆ ಅಂತ ಚಂದ್ರು ಕೊಲೆ ವಿಚಾರವಾಗಿ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಬಿಜೆಪಿಯವರು ಕೆಟ್ಟ ಹುಳಗಳು. ಕೇಸರಿ ಅನ್ನೋದು ಬಿಜೆಪಿಯವರ ಅಪ್ಪನ ಆಸ್ತಿಯಲ್ಲ. ಕೇಸರಿ ತ್ಯಾಗದ ಸಂಕೇತ. ಆದರೆ ಕೇಸರಿ ಹಾಕಿಕೊಂಡು ಇವರು ಬೆಂಕಿ ಹಚ್ಚುತ್ತಾರೆ. ಕೇಸರಿಗೆ ಒಂದು ಶಕ್ತಿ ಇದೆ. ಆದರೆ ಕೇಸರಿ ಹಾಕಿಕೊಂಡು ಕೋಳಿ ಕುಯ್ಯುತ್ತಾರೆ. ರಾಜ್ಯದಲ್ಲಿ ನಡೆಯೋ ಕೆಲಸಗಳ ಹಿಂದೆ ಬೊಮ್ಮಾಯಿ ಇದ್ದಾರೆ. ಇಡೀ ಸರ್ಕಾರದ ಬೆಳವಣಿಗೆ ಮಂತ್ರಿಮಂಡಲದಿಂದಲೆ ನಡೆಯುತ್ತದೆ. ಆದರೂ ರಾಜ್ಯದ ಮುಖ್ಯಮಂತ್ರಿ ಒಂದು ಮಾತು ಆಡ್ತಾ ಇಲ್ಲವಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.