ಬೆಂಗಳೂರು: ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಬಿಜೆಪಿ ತನ್ನ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದೆ. ನಮಗೆ ಬೆಂಬಲ ಕೊಡಿ ಅಂತ ಜೆಡಿಎಸ್ ಕುಪೇಂದ್ರ ರೆಡ್ಡಿ ನಿಲ್ಲಿಸಿದ್ರೆ, ನಮ್ಮ ಎರಡು ಅಭ್ಯರ್ಥಿಗಳು ಗೆಲ್ಲುತ್ತಾರೆಂದು ಕಾಂಗ್ರೆಸ್ ಮನ್ಸುರ್ ಖಾನ್ ಅವರನ್ನು ನಿಲ್ಲಿಸಿತ್ತು. ಕೊನೆವರೆಗೂ ಜೆಡಿಎಸ್ ಕಾಂಗ್ರೆಸ್ ಮೈತ್ರಿಗೆ ಹರಸಾಹಸವನ್ನೆ ಪಟ್ಟಿತ್ತು. ಕಡೆಗೆ ಬಿಜೆಪಿ ಪಕ್ಷದ ಇಬ್ಬರು ಗೆಲ್ಲುವ ನಿರೀಕ್ಷೆ ಇತ್ತು, ಮೂರನೇ ಅಭ್ಯರ್ಥಿಗೆ ಮತದ ಅಗತ್ಯತೆ ಇತ್ತು. ಆದರೆ ಬಿಜೆಪಿಯ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ನ ಜೈರಾಮ್ ರಮೇಶ್ ಗೆಲುವಿನ ನಗೆ ಬೀರಿದ್ದು, ಜೆಡಿಎಸ್ ಕುಪೇಂದ್ರ ರೆಡ್ಡಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯಿಂದ ಕೇಂದ್ರ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತರಾಮನ್ ಕರ್ನಾಟಕ ರಾಜ್ಯಸಭೆಗೆ ಬಾರಿಯೂ ಆಯ್ಕೆಯಾಗಿದ್ದಾರೆ. ಇನ್ನು ನಟ ಜಗ್ಗೇಶ್ ಮೊದಲ ಬಾರಿಗೆ ಗೆಲುವು ಕಂಡಿದ್ದಾರೆ. ಇನ್ನು ಬಿಜೆಪಿಯ ಮೂರನೇ ಅಭ್ಗರ್ಥಿ ಲೆಹರ್ ಸಿಂಗ್ ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳಿಂದ ಗೆಲುವು ಕಂಡಿದ್ದಾರೆ. ಪರೋಕ್ಷವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಗುದ್ದಾಟ ಲೆಹರ್ ಸಿಂಗ್ ಗೆಲವಿಗೆ ಕಾರಣವಾಗಿದೆ.
ಇನ್ನು ಬಿಜೆಪಿಯ ನಿರ್ಮಲಾ ಸೀತರಾಮನ್ ಪ್ರಥಮ ಪ್ರಾಶಸ್ತ್ಯದ ಮತ ಗಳಿಸಿದ್ದು, 46 ಮತ ಪಡೆದಿದ್ದಾರೆ. ನಟ ಜಗ್ಗೇಶ್ ಪ್ರಥಮ ಪ್ರಾಶಸ್ತ್ಯದ ಮತಗಳನ್ನೇ ಪಡೆದಿದ್ದು, 44 ಮತ ಗಳಿಸಿದ್ದಾರೆ. ಲೆಹರ್ ಸಿಂಗ್ ಪಡೆದ ಮತ 33 ಆಗಿದೆ. ಇನ್ನು ಕಾಂಗ್ರೆಸ್ ನ ಜೈರಾಮ್ ರಮೇಶ್ ಮೊದಲ ಪ್ರಾಶಸ್ತ್ಯದ 44 ಮತ ಪಡೆದಿದ್ದಾರೆ. ಮನ್ಸೂರ್ ಅಲಿಖಾನ್ ಅವರು ಸೋಲು ಅನುಭವಿಸಿದ್ದು, 25 ಮತ ಪಡೆದಿದ್ದಾರೆ. ಜೆಡಿಎಸ್ ನಿಂದ ಸೋಲು ಅನುಭವಿಸಿದ್ದು, ಕುಪೇಂದ್ರ ರೆಡ್ಡಿ, 30 ಮತ ಪಡೆದಿದ್ದಾರೆ.