ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜ. 04 : ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳರವರು ಆತ್ಮಹತ್ಯೆ ಕಾರಣರಾದ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇದಕ್ಕೆ ಕಾರಣರಾದ ಅವರ ಹಿಂಬಾಲಕರಿಗೆ ಶಿಕ್ಷೆಯಾಗಬೇಕು, ಈಗ ಏರಿಸಿರುವ ಬಸ್ ದರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರದ ಓನಕೆ ಒಬವ್ವ ವೃತ್ತದಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಿತು.
ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ, ಸಿ.ಎಂ.ಸಿದ್ದರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆಯವರ ವಿರುದ್ದ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಮುಖಂಡರು ಘೋಷಣೆಗಳನ್ನು ಕೂಗಲಾಯಿತು. ಇವರ ವಿರುದ್ದ ವಿವಿಧ ರೀತಿಯ ಭಿತ್ತಿ ಪತ್ರಗಳನ್ನು ಸಹಾ ಹಿಡಿಯಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಲ್ಲಿ ಸಚಿವರು ಹಾಗೂ ಆವರ ಹಿಂಬಾಲಕರ ಪಾತ್ರ ಇರುವುದು ಅವರು ಬರೆದಿಟ್ಟ ಡೆತ್‍ನೋಟ್‍ನಲ್ಲಿ ಬಹಿರಂಗವಾಗಿದೆ. ಇಷ್ಠಾದರು ಸಹಾ ಪೋಲಿಸವರು ಇವರ ಬಗ್ಗೆ ಯಾವ ಕಾನೂನು ಕ್ರಮವನ್ನು ಇದುವರೆವಿಗೂ ಕೈಗೊಂಡಿಲ್ಲ, ನಮ್ಮ ರಾಜ್ಯದಲ್ಲಿ ಕಾನೂನು ಸತ್ತು ಹೋಗಿದೆ ಇದ್ದವರಿಗೆ ಒಂದು ರೀತಿಯಾದರೆ ಇಲ್ಲದವರಿಗೆ ಒಂದು ರೀತಿಯಲ್ಲಿ ಪೋಲಿಸವರು ನಡೆಯುತ್ತಿದ್ದಾರೆ ಇದಕ್ಕೆ ಸರ್ಕಾರವೂ ಸಹಾ ಕುಮ್ಮಕ್ಕು ನೀಡುತ್ತಿದೆ. ರಾಜ್ಯದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ಘೋಷಣೆಯಾದಂತೆ ಅಗಿದೆ ಎಂದು ದೂರಿದರು.
ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವಷ್ಠವಾಗಿ ಕಾಣುತ್ತದೆ. ಖರ್ಗೆ ಬಂಟರು ಆತ್ಮಹತ್ಯೆಗೆ ಕಾರಣ ಆಗಿದ್ದಾರೆ. 5% ಹಣ ಕೊಡಿ ನಾವು ಟೆಂಡರ್ ಮಾಡಿಕೊಡುತೇವೆ ಎಂದು ಕಿರುಕುಳ ಕೊಟ್ಟಿದ್ದರಿಂದ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ.ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಸರಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ರಾಜ್ಯ ಸರಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಟೆಂಡರ್ ಮಾಡಿಕೊಡಲು ಶೇ 5 ದುಡ್ಡಿನ ಬೇಡಿಕೆ ಇಟ್ಟಿರುತ್ತಾರೆ..ಪ್ರಿಯಾಂಕ್ ಖರ್ಗೆ ನಾನು ಹೇಳಿದ ಮಾತನ್ನು ಮೀರುವುದಿಲ್ಲ.. ಸಚಿವರ ಬೆಂಬಲ ಇದೆ ಎಂದು ರಾಜು ಕಪನೂರ್ ಹೇಳಿದ್ದಾಗಿ ಸಚಿನ್ ಡೆತ್ ನೋಟಿನಲ್ಲಿ ಬರೆದಿದ್ದಾರೆ ಎಂದರು.
ಸುಸೈಡ್‍ನಲ್ಲಿ ಭಾಗಿಯಾಗಿರುವ ಮಂತ್ರಿಗಳ ಬೆಂಗಾವಲಿಗೆ ಸ್ವತಃ ಸಿದ್ಧರಾಮಯ್ಯರವರು ನಿಂತಿದ್ದಾರೆ.ಸ್ವತಹ ಸಿದ್ದರಾಮಯ್ಯನವರೇ ಮಂತ್ರಿಗಳಿಗೆ ಕ್ಲೀನ್ ಚಿಟ್ ಕೊಡುತ್ತಿದ್ದಾರೆ.ರಾಜ್ಯದಲ್ಲಿ ಪ್ರಿಯಾಂಕ ಖರ್ಗೆಯವರೇ ಸೂಪರ್ ಸಿಎಂ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆಯವರ ಮಗ ಎನ್ನುವ ಕಾರಣಕ್ಕೆ ಸೂಪರ್ ಸಿಎಂ ಆಗಿ ವರ್ತನೆ ಮಾಡುತ್ತಿದ್ದಾರೆ.ಸಿದ್ದರಾಮಯ್ಯರವರಿಗೆ ದೇಶದ ಕಾನೂನಿನ ಬಗ್ಗೆ, ಸಂವಿಧಾನದ ಬಗ್ಗೆ ಗೌರವವಿದ್ದರೆ ಭಾಗಿಯಾಗಿರುವ ಸಚಿವರ ರಾಜೀನಾಮೆಯನ್ನು ಪಡೆಯಬೇಕು. ಅವರು ಕಳಂಕಿತರಾಗಿದ್ದು ಸಂಪುಟದಲ್ಲಿ ಕೂರಲು ಅರ್ಹತೆ ಇಲ್ಲ ಎಂದು ಆಗ್ರಹಿಸಿದ ಮಲ್ಲಿಕಾರ್ಜನ್, ಪ್ರಿಯಾಂಕಖರ್ಗೆ ಯವರ ಮೇಲೆ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯರವರಿಗೆ ಭಯ ಇದೆ ಇವರ ಮೇಲೆ ಕ್ರಮ ತೆಗೆದುಕೊಂಡರೆ ನನ್ನ ಸಿ.ಎಂ.ಸ್ಥಾನ ಹೋಗುತ್ತದೆ ಎಂದು ಸುಮ್ಮನಿದ್ದರೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಹಾ ಸಚಿವ ಪ್ರಿಯಾಂಕರವರ ಮೇಲೆ ಕ್ರಮ ತೆಗೆದುಕೊಳ್ಳಲು ಸಹಾ ಹೆದರುತ್ತಾರೆ ಏಕೆಂದರೆ ಮುಂದಿನ ಸಿ.ಎಂ. ಆಗುವುದಕ್ಕೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್, ಕಲ್ಲಂ ಸೀತಾರಾಮರೆಡ್ಡಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಗ್ರಾಮಾಂತರ ಘಟಕದ ಅಧ್ಯಕ್ಷ ಕಲ್ಲೇಶಯ್ಯ, ನಗರಸಭೆಯ ಮಾಜಿ ಸದಸ್ಯರಾದ ಲೋಕೇಶ್, ನಾಗರಾಜ್, ಛಲವಾದಿ ತಿಪ್ಪೇಸ್ವಾಮಿ, ಯೋಗಿಶ್ ಸಹ್ಯಾದ್ರಿ, ಪಂಡು, ನಾಗೇಂದ್ರ, ಮೂರಾರ್ಜಿ, ಸತ್ಯನಾರಾಯಣ, ಕಿರಣ್, ಗೀರೀಶ್ ಮಹಿಳಾ ಘಟಕದ ಪದಾಧಿಕಾರಿಗಳಾದ ಬಸಮ್ಮ, ವೀಣಾ, ಉಷಾಭಾಯಿ, ಶಾಂತಮ್ಮ, ಸುಮ, ಕಾಂಚನ ಸೇರಿದಂತೆ ಇತರರು ಭಾಗವಹಿಸಿದ್ದರು.