ಬೆಂಗಳೂರು: ಈ ಬಾರಿಯ ಚುನಾವಣಾ ಅಖಾಡ ಸಿಕ್ಕಾಪಟ್ಟೆ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಯಾಕಂದ್ರೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಸಿಗದೆ ಬಂಡಾಯವೆದ್ದು, ಬೇರೆ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಹೆಚ್ಚು ಲಿಂಅಗಾಯತ ಮತಗಳನ್ನು ಸೆಳೆಯುವತ್ತ ಗಮನ ಹರಿಸಿದೆ. ಅದಕ್ಕೆ ತಕ್ಕನಾಗಿ ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಬಂದಿದ್ದಾರೆ. ಹುಬ್ಬಳ್ಳಿ ಧಾರವಾಡ ಕೇಂದ್ರದಿಂದ ಸ್ಪರ್ಧೆ ಮಾಡಿದ್ದಾರೆ.
ಇದು ಬಿಜೆಪಿಗೆ ಒಂದು ರೀತಿಯ ಡ್ಯಾಮೇಜೇ ಸರಿ. ಅದಕ್ಕಾಗಿಯೇ ಬಿಜೆಪಿ ಕೂಡ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಲಿಂಗಾಯತ ಮತಗಳು ಎಲ್ಲಿಯೂ ಹೋಗದಂತೆ ನೋಡಿಕೊಳ್ಳಲು ಆರ್ ಎಸ್ ಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ನಡೆಸಿದೆ. ಇದೇ ಕಾರಣಕ್ಕೇನೆ ಇತ್ತಿಚೆಗೆ ಜೆಪಿ ನಡ್ಡಾ ಅವರು ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿ ಮಠಾಧೀಶರನ್ನು ಕಂಡು ಹೋಗಿದ್ದಾರೆ.
ಈ ಕಡೆ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲು ಎಲ್ಲಾ ತಯಾರಿ ನಡೆಸುತ್ತಿರುವುದಲ್ಲದೆ, ಲಿಂಅಗಯಾತರ ಮತಗಳನ್ನು ಸೆಳೆಯಲು ದೊಡ್ಡ ಮಟ್ಟದ ಯೋಜನೆ ಹಾಕಿಕೊಂಡಿದೆ. ಬಸವಜಯಂತಿಯಂದು ಬಸವಣ್ಣ ಅವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿ ಬಸವ ಜಯಂತಿಯನ್ನು ಹಮ್ಮಿಕೊಂಡಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿಯವರು ಭಾಗವಹಿಸಲಿದ್ದಾರೆ.