ಬೆಂಗಳೂರು: ಕಳೆದ ಕೆಲ ದಿನಗಳ ಹಿಂದಷ್ಟೇ ಒಡಿಶಾದ ಶಾಸಕರು ರಾಮನಗರದ ರೆಸಾರ್ಟ್ ಒಂದಕ್ಕೆ ಬಂದು ತಂಗಿದ್ದರು. ನಿನ್ನೆಯೆಲ್ಲಾ ಮೈಸೂರು ಟ್ರಿಪ್ ಹೊಡೆದಿದ್ದರು. ಇದೀಗ ಅವರೆಲ್ಲಾ ಇಲ್ಲಿಗೆ ಬಂದಿದ್ಯಾಕೆ ಎಂಬ ಸತ್ಯವನ್ನು ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ನಾಯಕರಿಂದ ಶಾಕರಿಗೆಲ್ಲಾ ಎಷ್ಟು ಕೋಟಿ ಹಣ ಆಮಿಷವೊಡ್ಡಿದ್ದಾರೆಂದು ಶಾಕಿಂಗ್ ನ್ಯೂಸ್ ತಿಳಿಸಿದ್ದಾರೆ.
ರಾಹ್ಯಸಭಾ ಚುನಾವಣೆಗೆ ಮುನ್ನ ನಡೆದ ಈ ಘಟನೆಯಲ್ಲಿ ಶಾಸಕರಿಗೆ ಐದು ಕೋಟಿ ರೂಪಾಯಿ ಮತ್ತು ಖಾಲಿ ಚೆಕ್ ಗಳ ಆಮಿಷ ಒಡ್ಡಲಾಗಿತ್ತು ಬೈತರಾಯನಪುರದ ಸುರೇಶ್ ಎಂಬುವರ ಸಹಾಯದಿಂದ ಆನ್‌ಲೈನ್‌ನಲ್ಲಿ ರೆಸಾರ್ಟ್‌ನಲ್ಲಿ ಕೊಠಡಿ ಕಾಯ್ದಿರಿಸಿ ಈ ವ್ಯಕ್ತಿಗಳು ಶಾಸಕರನ್ನು ಭೇಟಿ ಮಾಡಿದ್ದರು. ಶಾಸಕರು ಈ ಪ್ರಸ್ತಾಪವನ್ನು ತಿರಸ್ಕರಿಸಿ ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾಂಗ್ರೆಸ್ ಮುಖಂಡರು ನಾಲ್ವರಲ್ಲಿ ಇಬ್ಬರನ್ನು ಹಿಡಿದಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿಗಳು ತಮ್ಮ ಉದ್ದೇಶವನ್ನು ಒಪ್ಪಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ದಾಖಲಿಸಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಹೆಗಲಿಗೆ ಈಗಾಗಲೇ ಅಸ್ಸಾಂ ಚುನಾವಣೆಯ ಹೊಣೆಯನ್ನು ಹಾಕಲಾಗಿದೆ. ಅಲ್ಲಿನ ಕಾಂಗ್ರೆಸ್ ನಾಯಕರನ್ನು ಗೆಲ್ಲಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಪಕ್ಷವನ್ನು ಬಲವಾಗಿ ಕಟ್ಟುವಲ್ಲಿ ಡಿಕೆಶಿ ಸ್ಟ್ರಾಂಗ್ ಆಗಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಹಲವು ರಾಜ್ಯದ ಚುನಾವಣಾ ಜವಾಬ್ದಾರಿಯನ್ನು ನೀಡಿದ್ದಾರೆ. ಇದೀಗ ಒಡಿಶಾದ ಶಾಸಕರನ್ನು ಕಾಪಾಡಿಕೊಳ್ಳಬೇಕಾದ ಜವಬ್ದಾರಿಯೂ ಅವರ ಮೇಲಿದೆ. ಇಲ್ಲಿ ಒಳ್ಳೆ ರೆಸಾರ್ಟ್ ಬುಕ್ ಮಾಡಿ, ಒಳ್ಳೆ ಸೌಲಭ್ಯ ನೀಡಿ ನೋಡಿಕೊಳ್ಳುತ್ತಿದ್ದಾರೆ.











