Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಚ್ಚೆಗೌಡ್ರು..!

Facebook
Twitter
Telegram
WhatsApp

 

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಕಾಂಗ್ರೆಸ್ ಅಂತು ಭರ್ಜರಿ ತಯಾರಿ ನಡೆಸುತ್ತಿದೆ. ಆಪರೇಷನ್ ಹಸ್ತದ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ತಮ್ಮ‌ ನಾಯಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಹೀಗಿರುವಾಗ ಬಿಜೆಪಿ ಚಿಕ್ಕಬಳ್ಳಾಪುರ ಸಂಸದ ಬಿಎನ್ ಬಚ್ಚೇಗೌಡ್ರು ಇದೀಗ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ರಾಜಕೀಯ ನಿವೃತ್ತಿ ಘೋಷಿಸಿ ಮಾತನಾಡಿದ ಬಚ್ಚೇಗೌಡ್ರು, ನನಗೀಗ ಎಂಪತ್ತೊಂದು ವರ್ಷ. ಪ್ರಧಾನಿ ಮೋದಿಯವರು ಹೇಳುವ ಪ್ರಕಾರ ಎಪ್ಪತ್ತು ವರ್ಷ ದಾಟಿದವರು ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕು. ಹೀಗಾಗಿ ನಾನು ಘೋಷಣೆ ಮಾಡಿದ್ದೀನಿ. ಜೊತೆಗೆ ಈ ಬಾರಿ ನನಗೆ ಟಿಕೆಟ್ ಸಿಗುವುದಿಲ್ಲ. ಅದಕ್ಕೆ ನಿವೃತ್ತಿ ಘೋಷಣೆ ಮಾಡಿದ್ದೇನೆ. ಅಷ್ಟೇ ಅಲ್ಲ ಪ್ರಧಾನಿ ಮೋದಿಯವರು ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಹೇಳಿದ್ದಾರೆ.

ಕುಟುಂಬದಲ್ಲಿ ತಂದೆ, ಮಗ, ಮೊಮ್ಮಗ ಅಂತ ಟಿಕೆಟ್ ನೀಡುವುದಿಲ್ಲ. ಹೀಗಾಗಿ ನಾನು ರಾಜಕೀಯ ನಿವೃತ್ತಿ ಘೋಷಣೆ‌ ಮಾಡುತ್ತಿದ್ದೇನೆ. ಪ್ರಧಾನಿ‌ ಮೋದಿಯವರ ಮಾತನ್ನು ಪಾಲನೆ‌ ಮಾಡುತ್ತಾ ಇದ್ದೀನಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಒಂದು ಕಡೆ ವಿಪಕ್ಷಗಳೆಲ್ಲಾ ಒಂದಾಗಿದ್ದು, ಈ ಬಾರಿ ಪ್ರಧಾನಿ ಮೋದಿಯನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿವೆ. ಮತ್ತೊಂದು ಕಡೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳ್ಳುತ್ತಿದೆ. ಕಾಂಗ್ರೆಸ್ ತೊರೆದವರನ್ನೆಲ್ಲಾ ಮತ್ತೆ ಪಕ್ಷಕ್ಕೆ ಕರೆತರುವ ಕೆಲಸವಾಗುತ್ತಿದೆ. ಇಂದು ಸಂಸದ ಬಚ್ಚೇಗೌಡ್ರು ನಿವೃತ್ತಿ ಘೋಷಣೆ‌ ಮಾಡಿದ್ದು, ಬಿಜೆಪಿಗೆ ಒಂದು ರೀತಿಯ ಶಾಕ್ ಆದಂತೆ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಛಾಯಾ ಟೈಲರ್ ರಮೇಶ್ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ನಗರದ ಲಕ್ಷ್ಮೀ ಬಜಾರ್‌ನಲ್ಲಿರುವ ಛಾಯಾ ಟೈಲರ್ ಅಂಗಡಿ ಮಾಲೀಕ ರಮೇಶ್ (52) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ವಗ್ರಾಮ ಹೊಸದುರ್ಗ

ಇಂದಿನಿಂದ ಹಾಸನಾಂಬೆಯ ದರ್ಶನ ಭಾಗ್ಯ : ಕ್ಯೂ ನಿಂತ ಭಕ್ತರು

  ಹಾಸನ: ವರ್ಷಕ್ಕೆ ಒಮ್ಮೆ ಬಾಗಿಲು ತೆಗೆಯುವ ದೇವಿ ಹಾಸನಾಂಬೆ. ಇದೀಗ ಮತ್ತೆ ಆ ದಿನ ಬಂದಿದೆ. ಹಾಸನಾಂಬೆಯ ಬಾಗಿಲು ತೆಗೆಯಲಾಗಿದೆ. ನಿನ್ನೆಯೇ ಹಾಸನಾಂಬೆಯ ಬಾಗಿಲು ತೆಗೆದಿದ್ದು, ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾತ್ರಿಯಿಂದಾನೇ

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು : ಛಲವಾದಿ ನಾರಾಯಣಸ್ವಾಮಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಹೊರಗೆ ನಿಂತಿದ್ದಾರೆ. ಬಿಜೆಪಿ ಶಾಸಕರು ಯಾರೂ ಅಷ್ಟು ದಡ್ಡತನ ಮಾಡುವುದಿಲ್ಲ. ಈಗ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ

error: Content is protected !!