ಉತ್ತರ ಕನ್ನಡ: ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿರೋಧ ಪಕ್ಷದವರ ಮೇಲೆ ಆಡಳಿತ ಪಕ್ಷದವರು, ಆಡಳಿತ ಪಕ್ಷದವರ ಮೇಲೆ ವಿರೋಧ ಪಕ್ಷದವರು ಕೆಸರೆರಚಾಟ ಮಾಡುವುದು ಕಾಮನ್. ಆದ್ರೆ ಕಾರವಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಿಜೆಪಿಯ ಹಾಲಿ ಶಾಸಕಿ ರೂಪಾಲಿ ನಾಯ್ಕೆ ಹಾಗೂ ಕಾಂಗ್ರೆಸ್ ನ ಮಾಜಿ ಎಂಎಲ್ಎ ಸತೀಶ್ ಸೈಲ್ ಪರಸ್ಪರ ದೂರು ನೀಡಿದ್ದಾರೆ. ಕಾರಾವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೇಪರ್ ವೇಯ್ಟರ್ ಜೊತೆ ಸೇರಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಸತೀಶ್ ಸೈಲ್ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ದೂರು ನೀಡುತ್ತಿದ್ದಂತೆ ಬಿಜೆಪಿ ಹಾಲಿ ಶಾಸಕಿ ರೂಪಾಲಿ ಕೂಡ ಪೊಲೀಸ್ ಠಾಣೆಗೆ ತೆರಳಿ ಅವರ ಮೇಲೆ ದೂರು ನೀಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂತು ನೀಡಿದ್ದಾರೆ .