ರೇಣುಕಾಚಾರ್ಯರಿಂದಾನೇ ಬಿಜೆಪಿ ಸೋತಿದ್ದು : ಹಿಂಗ್ಯಾಕ್ ಅಂದ್ರು ವೀರೇಶ್ ಹನಗವಾಡಿ..?

suddionenews
1 Min Read

ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನಷ್ಟೇ ಪಡೆದುಕೊಂಡಿದೆ. ಅದಕ್ಕೆ ರೇಣುಕಾಚಾರ್ಯ ಅವರೇ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ವೀರೇಶ್ ಹನಗವಾಡಿ ಆಕ್ರೋಶ ಹೊರಹಾಕಿದ್ದಾರೆ.

ರೇಣುಕಾಚಾರ್ಯ ಮಗಳಿಗೆ ಶಿಕ್ಷಣ ಕೊಡಿಸಲು ಎಸ್ಸಿ ಸಮುದಾಯದ ಪ್ರಮಾಣ ಪತ್ರವನ್ನು ಮಾಡಿಸಿದ್ದರು. ಆ ಪ್ರಕರಣ ಬೆಳಕಿಗೆ ಬಂದು ಹಂಗೆ ತಣ್ಣಗೆ ಆಗಿ ಹೋಯ್ತು. ಈ ಬಗ್ಗೆಯೇ ಹರಿಹಾಯ್ದಿರುವ ವೀರೇಶ್ ಹನಗವಾಡಿ, ರೇಣುಕಾಚಾರ್ಯ ಅವರು ವೀರಶೈವ ಜಂಗಮ ಜಾತಿಯಲ್ಲಿ ಹುಟ್ಟಿದವರು. ವೀರಶೈವರಲ್ಲಿ ಇವರಿಗೆ ಗುರುವಿನ ಸ್ಥಾನಮಾನವಿದೆ. ಇಂತವರು ಪರಿಶಿಷ್ಟ ಜಾತಿಗೆ ಸೇರಿದ ಬೇಡ-ಜಂಗಮರ ಜಾತಿಪತ್ರವನ್ನು ಪಡೆದರು. ಇದರಿಂದಾನೇ ಬಿಜೆಪಿಗೆ ಹೆಚ್ಚಿನ ಸೀಟು ಬರುವುದಕ್ಕೆ ವಿಫಲವಾಯಿತು. ರೇಣುಕಾಚಾರ್ಯ ಯಾವಾಗ ಪರಿಶಿಷ್ಟ ಜಾತಿಗೆ ಸೇರಿದ ಜಂಗಮ ಜಾತಿ ಪ್ರಮಾಣ ಪತ್ರವನ್ನು ಪಡೆದರೋ ಇಡೀ ರಾಜ್ಯದಲ್ಲಿನ ದಲಿತರು, ಬಿಜೆಪಿಯ ವಿರೋಧಿಗಳಾದರು.

 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 66 ಸೀಟು ಬರುವುದಕ್ಕೆ ಇದೇ ಪ್ರಮುಖವಾದ ಕಾರಣ. ಇದರ ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲೂ ತೊಡಗಿ ಬಿಜೆಪಿ ಅಭ್ಯರ್ಥಿಯ ಸೋಲಿಗೇನೆ ಕಾರಣವಾದವರು. ಅಮಿತ್ ಶಾ ಅವರು ರೇಣುಕಾಚಾರ್ಯ ಅವರಿಗೆ ಕೈ ಮುಗಿದು ಕ್ಷಮೆ ಕೇಳಿದ್ದರು. ಈ ಹಿಂದೆ ಅಮಿತ್ ಶಾ ಜೊತೆಗೆ ಸಭೆ ಮಾಡಿದ್ದಾಗ ರೇಣುಕಾಚಾರ್ಯ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ದೂರು ನೀಡಿದ್ದರು. ಈ ವೇಳೆ ಸ್ವತಃ ಅಮಿತ್ ಶಾ ಅವರು ಕ್ಷಮೆ ಕೇಳಿದ್ದರು ಸಹ ಚುನಾವಣೆಯಲ್ಲಿ ಚೆನ್ನಾಗಿ ಕೆಲಸ ಮಾಡಬೇಕಿತ್ತು.‌ಆದರೆ ಮಾಡಲೇ ಇಲ್ಲ. ಈ ವಿಚಾರವನ್ನು ವರಿಷ್ಠರಿಗೆ ತಿಳಿಸಿದ್ದೇವೆ ಎಂದು ರೇಣುಕಾಚಾರ್ಯ ವಿರುದ್ಧ ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *