ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ವಿಚಾರ ಇಂದು ಸದನದಲ್ಲೂ ಪ್ರತಿಧ್ವನಿಸಿದೆ. ಕಾಂಗ್ರೆಸ್ ಬಿಜೆಪಿ ನಾಯಕರ ವಾಗ್ವಾದಕ್ಕೆ ಕಾರಣವಾಗಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಬಜೆಟ್ ಮೇಲಿನ ಚರ್ಚೆ ವಿಧಾನಸಭೆಯಲ್ಲಿ ಶುರು ಮಾಡಿದ್ದು, ಇದೇ ವೇಳೆ ಚುನಾವಣಾ ಫಲಿತಾಂಶದ ಬಗ್ಗೆಯೂ ಮಾತುಕಥೆಗಳು ನಡೆಯುತ್ತಿವೆ. ಕಲಾಪ ಆರಂಭವಾಗುತ್ತಿದ್ದಂತೆ ಮಾಮೂಲಿಯಂತೆ ಯು ಟಿ ಖಾದರ್ ಮಾತನಾಡಲು ಶುರು ಮಾಡಿದ್ದಾರೆ. ಆದ್ರೆ ಇದೇ ವೇಳೆ ಕಾಂಗ್ರೆಸ್ ಕಥೆ ಮುಗೀತಲ್ವಾ ಎಂದು ಬಿಜೆಪಿ ಸದಸ್ಯರು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಸದನದಲ್ಲಿಯೇ ಬಿಜೆಪಿ ನಾಯಕರು ಜೈಶ್ರೀರಾಮ್ ಎಂದು ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ಜೈ ಹನುಮಾನ್ ಘೋಷಣೆಯೂ ಕೇಳಿ ಬಂದಿದೆ. ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಲು ಶುರು ಮಾಡಿದಾಗ, ಈಶ್ವರಪ್ಪ ಅವರಂತೂ ಸಿಎಂ ಆಗಲ್ಲ, ಯಾಕಿಷ್ಟು ಮಾತಾಡುತ್ತಾರೋ ಎಂದು ಶಾಸಕ ಪ್ರಿಯಾಂಕ ಖರ್ಗೆ ಈಶ್ವರಪ್ಪ ಅವರ ಕಾಲೆಳೆದಿದ್ದಾರೆ.