ಮೋದಿ ದೇಶದ್ರೋಹಿ ಹೇಳಿಕೆಗೆ ಸದನದಲ್ಲಿ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ ನಾಯಕರು..!

1 Min Read

 

ಬೆಂಗಳೂರು: ವಿಧಾನಪರಿಷತ್ ಅಧಿವೇಶನ ಆರಂಭವಾಗಿದೆ. ನಿನ್ನೆ ಮೋದಿ ದೇಶದ್ರೋಹಿ ಎಂಬ ಮಾತನ್ನ ಕಾಂಗ್ರೆಸ್ ಎಂಎಲ್ಸಿ ನಜೀರ್ ಅಹ್ಮದ್ ಹೇಳಿದ್ರು. ಈ ಹೇಳಿಕೆಯಿಂದ ದೊಡ್ಡಮಟ್ಟದ ಕೋಲಾಹಲ ಉಂಟಾಗಿತ್ತು. ಇದೀಗ ಇಂದು ಅಧಿವೇಶನ ಆರಂಭವಾದ ಬೆನ್ನಲ್ಲೇ ಪರಿಷತ್ ನಲ್ಲಿ ಮೋದಿ ದೇಶದ್ರೋಹಿ ವಿವಾದ ಚರ್ಚೆಗೆ ಬಂದಿದೆ.

ಬಿಜೆಪಿ ನಾಯಕರು ಈ ಹೇಳಿಕೆಗೆ ಕೆಂಡಾಮಂಡಲರಾಗಿದ್ದಾರೆ. ಈ ವಿಚಾರಕ್ಕೆ ಎಂಎಲ್ಸಿ ನಜೀರ್ ಅಹ್ಮದ್ ಕ್ಷಮೆಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ನಜೀರ್ ಅಹ್ಮದ್ ಕ್ಷಮೆ ಕೇಳದೆ ಹೋದರೆ ಸದನದಿಂದ ಹೊರಹಾಕಬೇಕು ಎಂಬ ಒತ್ತಡವೂ ಕೇಳಿ ಬಿಜೆಪಿ ನಾಯಕರಿಂದ ಕೇಳಿ ಬರ್ತಾ ಇದೆ.

ಭಾರತೀಯರ ನಾಲಿಗೆ ಆಗಿದ್ದರೆ ಪ್ರಧಾನಿ ಬಗ್ಗೆ ಮಾತನ್ನಾಡುವುದಿಲ್ಲ. ಆದರ ಅದು ಪಾಕಿಸ್ತಾನದ ನಾಲಗೆಯಾಗಿರಬೇಕು ಅಂತ ಸಿಟಿ ರವಿ ಅವರು ಕೆಂಡಾಮಂಡಲರಾಗಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿದ್ದ ನಜೀರ್ ಅಹ್ಮದ್ ಅವರನ್ನು ಹೊರ ಹಾಕಿ ಎಂದು ಘೋಷಣೆ ಕೂಗಿದ್ದಾರೆ.

ವಿಶ್ಲೇಷಣೆ ನಮಗೆ ಬೇಡ. ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರೆ, ನೀವ್ಯಾರು ಅವರನ್ನ ಹೊರ ಹಾಕಿ ಅಂತ ಹೇಳೋದಕ್ಕೆ ಅಂತ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ನೀವೇ ಸಭಾಪತಿ ಸ್ಥಾನದಲ್ಲಿ ಕೂತು ಬಿಡಿ ಎಂದು ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಮಾತನಾಡೋದಕ್ಕೆ ಅವಕಾಶ ಇಲ್ಲ. ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹ ಮಾಡಿದ್ದಾರೆ.

ಸನ್ಮಾನ ರವಿ ಅವರು ಇದು ಪಾಕಿಸ್ತಾನದ ನಾಲಿಗೆಯ ಇದು ಅಂದ್ರು. ನಾವೂ ಹುಟ್ಟಿ ಬೆಳೆದಿರುವುದು ಕರ್ನಾಟಕದಲ್ಲಿ. ನಾವೇನು ಪಾಕಿಸ್ತಾನದಲ್ಲಿ ಹುಟ್ಟಿ ಬಂದಿದ್ದೀವಾ ಅಂತ ನಜೀರ್ ಅಹ್ಮದ್ ಹೇಳಿದ್ರು.

Share This Article
Enable Notifications OK No thanks