ಎಂ. ಎ. ಸೇತುರಾಮ್ ಅವರಿಗೆ ಮಾತೃವಿಯೋಗ

1 Min Read

ಚಿತ್ರದುರ್ಗ, (ಫೆ.03) : ಹಿರಿಯೂರಿನ ಹುಳಿಯಾರು ರಸ್ತೆ ನಿವಾಸಿ ಶ್ರೀ ಹನುಮಾನ್ ಆಯಿಲ್ ಮಿಲ್ಸ್ ಮಾಲೀಕರಾದ ಲೇಟ್ ಎಂ. ಎಚ್. ಅಂಜನಪ್ಪ ಇವರ ಧರ್ಮ ಪತ್ನಿ ಎಲ್. ರಾಧಮ್ಮ(92)  ಇಂದು ಸಂಜೆ ಸುಮಾರು 6 ಗಂಟೆಗೆ ನಿಧನರಾದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಎಂ.ಎ. ಸೇತೂರಾಮ್ ಸೇರಿದಂತೆ ಇಬ್ಬರು ಪುತ್ರರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗು ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು  ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾನ್ಹ 1 ಗಂಟೆಗೆ ಹಿರಿಯೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ನಿಧನಕ್ಕೆ ಪಕ್ಷ ಭೇದ ಮರೆತು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *