ಚಿಕ್ಕಮಗಳೂರು: ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದದ ಮೇಲೆಯೇ ಚುನಾವಣೆ ಎದುರಿಸುತ್ತಿದ್ದಾರೆ ಎಂಬ ಮಾತನ್ನ ಕಾಂಗ್ರೆಸ್ ನವರು ಆಗಾಗ ಹೇಳ್ತಾನೆ ಇದ್ದಾರೆ. ಇದೇ ವಿಚಾರವನ್ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕೂಡ ಹೇಳಿದ್ದರು. ಇದೀಗ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಸಿ ಟಿ ರವಿ ತಿರುಗೇಟು ನೀಡಿದ್ದಾರೆ. ಅವರ ಸಹಾಯವಿಲ್ಲದೆ ಡಿಕೆ ಬ್ರದರ್ಸ್ ಗೆಲ್ಲುತ್ತಿರಲಿಲ್ಲ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ ಟಿ ರವಿ, ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳದೆ ಇದ್ದಿದ್ರೆ ಡಿಕೆಶಿ ಕೂಡ ಶಾಸಕರಾಗುತ್ತಿರಲಿಲ್ಲ. ಬಿಜೆಒಇ ವೀಕ್ ಆಗಿದೆ ಅಂತ ಡಿಕೆಶಿ ಹೇಳ್ತಾರೆ. ಜೆಡಿಎಸ್ ಸಪೋರ್ಟ್ ಇಲ್ಲದೆ ಹೋಗಿದ್ದರೆ ಡಿಕೆ ಬ್ರದರ್ಸ್ ಗೆಲ್ಲುತ್ತಿರಲಿಲ್ಲ. ಜೆಡಿಎಸ್ ನಲ್ಲಿ ಕೆಲವು ಮತಗಳಿವೆ. ಹೀಗಾಗಿ ಬೆಂಬಲ ಕೇಳಿದ್ದೇವೆ. ಅದನ್ನ ಹೊರತುಪಡಿಸಿ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಯಾವ ಒಳ ಒಪ್ಪಂದವೂ ಆಗಿಲ್ಲ. ನಮ್ಮ ಅವರ ನಡುವೆ ಇರುವುದು ಸಂಬಂಧ ಯಾವ ಒಪ್ಪಂದವೂ ಅಲ್ಲ ಎಂದಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರವಿದ್ದಾಗ ಕುಮಾರಸ್ವಾಮಿಯವರನ್ನುಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿದ ಸಿ ಟಿ ರವಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರನ್ನ ಕೆಳಗಿಳಿಸಿದ್ದು ಯಾರು..? ಕೆಳಗಿಳಿಸಲು ಅವರನ್ನು ಕಳುಹಿಸಿದ್ದು ಯಾರು..? ಕೂರಿಸಿದ್ದು ಅವರೇ ಕಡೆಗೆ ಕೆಳಗಿಳಿಸಿದ್ದು ಅವರೇ ಎಂದಿದ್ದಾರೆ.