ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ ಪಕ್ಷ ಸೋಲಿಸಲು ಈ ಪ್ಲ್ಯಾನ್ ಮಾಡಲಾಗಿದೆ. ಆದರೆ ಈ ಮೈತ್ರಿ ಜೆಡಿಎಸ್ ನಲ್ಲಿ ಸಾಕಷ್ಟು ನಾಯಕರಿಗೆ ಒಪ್ಪಿಗೆ ಇಲ್ಲ. ಈಗ ಮುಸ್ಲಿಂ ಮುಖಂಡರು ಪಕ್ಷ ತೊರೆಯುವುದಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಎನ್ ಎಂ ನಬಿ ಸೇರಿದಂತೆ ಜೆಡಿಎಸ್ ನ ಹಿರಿಯ ಉಪಾಧ್ಯಕ್ಷ ಸೈಯದ್ ಶಫೀವುಲ್ಲಾ, ನವದೆಹಲಿಯ ಮಾಜಿ ಪ್ರತಿನಿಧಿ ಮೊಹಿದ್ ಅಲ್ತಾಫ್, ಯುವ ಘಟಕದ ಅಧ್ಯಕ್ಷ ಎನ್ ಎಂ ನೂರ್, ಅಲ್ಪಸಂಖ್ಯಾತ ಘಟಕದ ಮಾಜಿ ಮುಖ್ಯಸ್ಥ ನೂರ್ ಮತ್ತು ಅಲ್ಪಸಂಖ್ಯಾತರ ವಿಭಾಗದ ಮಾಜಿ ಮುಖ್ಯಸ್ಥ ನಾಸಿರ್ ಹುಸೇನ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎನ್ಮಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಜೆಡಿಎಸ್, ಬಿಜೆಪಿಯ ಬಿ ಟೀಂ ಎಂಬ ಮಾತನ್ನು ಕಾಂಗ್ರೆಸ್ ಹೇಳಿತ್ತು. ಇದೇ ಕಾರಣಕ್ಕೆ ಮುಸ್ಲಿಂ ಮತಗಳು ಜೆಡಿಎಸ್ ನಿಂದ ಹೊರ ಹೋಗಿದ್ದವು. ಆದರೆ ಇದೀಗ ನೇರವಾಗಿಯೇ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈಗಾಗಲೇ ಶಫೀವುಲ್ಲಾ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಜಾತ್ಯಾತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು, ಈಗ ಬಿಜೆಪಿ ನಾಯಕರ ಜೊತೆ ಕೈ ಜೋಡಿಸಿದ ಕೂಡಲೇ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜೆಡಿಎಸ್ ಜಾತ್ಯಾತೀತ ಪಕ್ಷವಾಗಿದ್ದು, ರಾಜ್ಯದಲ್ಲಿ ಹಲವು ಕೋಮು ಗಲಭೆಗೆ ಸೃಷ್ಟಿಸಿದ ಬಿಜೆಪಿಗೆ ಸೇರಲು ಬಯಸಿರುವುದು ನಮಗೆ ನೋವಾಗಿದೆ ಎಂದೇ ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.