ಈಶ್ವರಪ್ಪ ಅವರನ್ನು ಮತ್ತೆ ಆಹ್ವಾನಿಸಿದ ಬಿಜೆಪಿ : ವಾಪಸ್ ಹೋಗ್ತಾರಾ ಈಶ್ವರಪ್ಪ..?

 

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿತ್ತು. ಬಿಜೆಪಿಯಲ್ಲಿಯೇ ಇದ್ದ ಈಶ್ವರಪ್ಪ ಬಂಡಾಯವೆದ್ದು, ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ಕಣಕ್ಕೆ ಇಳಿದಿದ್ದರು. ಆದರೆ ವಿಜಯೇಂದ್ರ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದರು. ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಕಡಿಮೆ ಮತಗಳನ್ನು ಪಡೆದಿದ್ದರು‌. ಇದೀಗ ಈಶ್ವರಪ್ಪ ಅವರನ್ನು ಬಿಜೆಪಿ ಮತ್ತೆ ಪಕ್ಷಕ್ಕೆ ಆಹ್ವಾನಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಹೌದು ಕರೆದಿದ್ದಾರೆ. ಆದರೆ ನನ್ನ ಅಭಿಪ್ರಾಯ ಏನು ಎಂಬುದನ್ನು ನಾನಿನ್ನು ಸ್ಪಷ್ಟವಾಗಿ ಹೇಳಿಲ್ಲ ಎಂದಿದ್ದಾರೆ. ಕೇವಲ ಚುನಾವಣೆಗಳಿಗೆ ಮಾತ್ರ ಕರೆಯುವ ಕೆಲಸಗಳಾಗುತ್ತವೆ. ನಾನು ಕಾರ್ಯಕರ್ತರೊಂದಿಗೆ ಚರ್ಚಿಸಬೇಕಾಗುತ್ತದೆ. ಪಕ್ಷದಿಂದ ಹೊರ ಬಿದ್ದಿದ್ದು ತನ್ನ ಅಸ್ತಿತ್ವಕ್ಕೇನು ತೊಂದರೆಯಾಗಿಲ್ಲ.
ಪಕ್ಷ+ ಕಾರ್ಯಕರ್ತ = ಹೀರೋ
ಪಕ್ಷ – ಕಾರ್ಯಕರ್ತ = ಜೀರೋ ಇದು ಮೊದಲಿನಿಂದಾನು ಬಂದಿರುವುದೇ.ಪಕ್ಷಕ್ಕೆ ಪ್ರಾಧಾನ್ಯತೆ ಕೊಟ್ಟುಕೊಂಡೆ ಬಂದಿದ್ದೀವಿ. ಈಗಲೂ ಕೊಟ್ಟಿದ್ದೀವಿ ಎಂದು ಹೇಳಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಕೂಡ ಟಿಕೆಟ್ ಸಿಗಲಿಲ್ಲ ಅಂತ ಕಾಂಗ್ರೆಸ್ ನತ್ತ ಬಂದಿದ್ದರು. ಇಲ್ಲಿಯೂ ಸೋಲು ಕಂಡಿದ್ದರು. ಆದರೂ ಕಾಂಗ್ರೆಸ್ ಅವರಿಗೆ ಒಳ್ಳೆಯ ಸ್ಥಾನಮಾನ ನೀಡಿ, ಗೌರವಿಸಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಮತ್ತೊಮ್ಮೆ ತಮ್ಮ ಪಕ್ಷಕ್ಕೆ ಕರೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈಗ ಈಶ್ವರಪ್ಪ ಅವರನ್ನು ಪಕ್ಷಕ್ಕೆ ವಾಪಾಸ್ ಕರೆತರುವ ಪ್ರಯತ್ನ ನಡೆಯುತ್ತಿರಬಹುದು. ಹೌದು ಎಂದು ಈಶ್ಚರಪ್ಪ ಅವರೇ ಉತ್ತರವನ್ನು ನೀಡಿದ್ದಾರೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಟಿಕೆಟ್ ಬೇಕೆಂದು ಈಶ್ವರಪ್ಪ ಹೋರಾಡಿದರು. ಆದರು ಅದು ಸಾಧ್ಯವಾಗದೆ ಇದ್ದಾಗ ಬಂಡಾಯವೆದ್ದಿದ್ದರು.

Share This Article
Leave a Comment

Leave a Reply

Your email address will not be published. Required fields are marked *