ಮೈಸೂರು: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಾ ಇದೆ. ಈ ಬಗ್ಗೆ ಮಾತನಾಡಿರು ಸಂಸದ ಶ್ರೀನಿವಾಸ್ ಪ್ರಸಾದ್ ಬಿಜೆಪಿಯಂತ ದೊಡ್ಡ ಪಕ್ಷಕ್ಕೆ ಯಾರ ಮೈತ್ರಿಯೂ ಅಗತ್ಯವಿಲ್ಲ ಎಂದಿದ್ದಾರೆ.
ಪರಿಷತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಟಿ ನಡೆಸಿದ್ದು, ಮೈತ್ರಿ ಬಗ್ಗೆ ಗರಂ ಆಗಿದ್ದಾರೆ. ಬಿಜೆಪಿಗೆ ಯಾರ ಮೈತ್ರಿಯ ಅಗತ್ಯವೂ ಇಲ್ಲ. ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳಲ್ಲ ಎಂದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಎಷ್ಟು ಸ್ಥಾನ ಗಳಿಸಿದೆ ಎಂಬುದನ್ನ ನಾವೂ ನೋಡಿದ್ದೇವೆ. ಹೆಚ್ಚು ಸ್ಥಾನದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಹೀಗಾಗಿ ಅಷ್ಟು ದೊಡ್ಡ ಪಕ್ಷಕ್ಕೆ ಯಾರ ಮೈತ್ರಿಯೂ ಅಗತ್ಯವಿಲ್ಲ ಎಂದಿದ್ದಾರೆ.
ಇದೆ ವೇಳೆ ಸಿದ್ದರಾಮಯ್ಯ ವಿಚಾರ ಮಾತನಾಡಿದ್ದು, ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಿಟ್ಟು ಬದಾಮಿಗೆ ಹೋಗಿದ್ದು ಅವರ ಅಸಾಹಯಕತೆಯನ್ನ ತೋರಿಸುತ್ತದೆ. ಸೋತ ತಕ್ಷಣ ತಮ್ಮ ಕ್ಷೇತ್ರವನ್ನ ಬಿಟ್ಟುಕೊಡಬಾರದು. ಬಾದಾಮಿಯಲ್ಲಿ 35 ಸಾವಿರ ಮತಗಳಿಂದ ಸೋತಿದ್ದರು ಬುದ್ದಿ ಬಂದಿಲ್ಲ. ಸಿಎಂ ಆಗಿದ್ದವರು ನೀವೆ ಹೆದರಿಕೊಂಡು ಓಡಿದರೆ ಹೇಗೆ..? ವೀರಾವೇಷದ ಮಾತುಗಳನ್ನ ಆಡ್ತೀರಾ ಆದ್ರೆ ಹೆದರಿಕೊಂಡು ಬದಾಮಿಗೆ ಹೋಗ್ತೀರಾ ಎಂದು ಸಿದ್ದರಾಮಯ್ಯ ಅವರು ಚಾಮುಂಡಿ ಕ್ಷೇತ್ರ ಬಿಟ್ಟು ಬದಾಮಿಯಲ್ಲಿ ಸ್ಪರ್ಧಿಸಿದ್ದರ ಬಗ್ಗೆ ಮಾತನಾಡಿದ್ದಾರೆ.