ಹಿಂದುತ್ವಕ್ಕೂ ಬಿಜೆಪಿಗೂ ಸಂಬಂಧವಿಲ್ಲ : ರಾಹುಲ್ ಗಾಂಧಿ

 

ಭಾನುವಾರ ಫ್ರಾನ್ಸ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಈ ವೇಳೆ ಹಿಂದುತ್ವಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಏನು ಮಾಡುತ್ತದೆ ಎಂಬುದರಲ್ಲಿ ಹಿಂದುತ್ವ ಏನೂ ಇಲ್ಲ ಎಂದಿದ್ದಾರೆ.

‘ನಾನು ಅನೇಕ ಉಪನಿಷತ್ತುಗಳನ್ನು ಓದಿದ್ದೇನೆ. ಅನೇಕ ಗೀತೆ ಕೇಳಿದ್ದೇನೆ. ಅನೇಕ ಹಿಂದೂ ಪುಸ್ತಕಗಳನ್ನು ಓದಿದ್ದೇನೆ. ಆದರೆ ಅದರಲ್ಲಿ ಎಲ್ಲಿಯೂ ನಿಮಗಿಂತ ದುರ್ಬಲರನ್ನು ಭಯಗೊಳಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ಅಥವಾ ಹಿಂದೂ ವ್ಯಕ್ತಿಯಲ್ಲೂ ಕೇಳಿಲ್ಲ. ಈ ಕಲ್ಪನೆ, ಈ ಪದ ಹಿಂದೂ ರಾಷ್ಟ್ರೀಯವಾದಿ. ಇದು ತಪ್ಪು ಕಲ್ಪನೆ. ಅವರಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಹಿಂದೂ ರಾಷ್ಟ್ರೀಯವಾದಿಗಳಲ್ಲ’ ಎಂದಿದ್ದಾರೆ.

ಬಿಜೆಪಿಯವರು ಏನೇ ಮಾಡಿದರೂ ಅಧಿಕಾರ ಪಡೆಯಬೇಕು ಎಂದು ಹೊರಟಿದ್ದಾರೆ. ಅವರಿಗೆ ಹಿಂದೂ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ನನ್ನ ದೇಶದ ಜಾತಿ ರಚನೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಇನ್ನು ಭಾರತ್ ಎಂದು ಹೆಸರು ಬದಲಿಸಲು ಹೊರಟ ಬಗ್ಗೆ ಮಾತನಾಡಿ, ಸಂವಿಧಾನವೂ ವಾಸ್ತವವಾಗಿ ಎರಡೂ ಹೆಸರನ್ನೂ ಬಳಸುತ್ತದೆ ಅಲ್ಲವೆ..? ಮೊದಲ ಸಾಲು, India, that is, Bharat, shall be a Union of States ಎಂಬುದಿದೆ. ಹೀಗಾಗಿ ನಾನು ಎರಡು ತಪ್ಪು ಎಂದು ಹೇಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *