ಹುಬ್ಬಳ್ಳಿ: ಕಳೆದ ಬಾರಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಸಾಕಷ್ಟು ವಿಚಾರದಲ್ಲಿ ಹರಿಹಾಯ್ದಿದ್ದರು. ಪೇಸಿಎಂ ಅಂತು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಾಂಗ್ರೆಸ್ ವಿರುದ್ಧ ಬಿಜೆಪಿ ಪೇ ಸಿಎಸ್ ಎಂದು ಆಕ್ರೋಶ ಹೊರ ಹಾಕಿದೆ. ಈ ವಿಚಾರಕ್ಕೆ ಇದೀಗ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಇದು ಕಾಂಗ್ರೆಸ್ ನ ಕಾಪಿ ಎಂದಿದ್ದಾರೆ.
ಬಿಜೆಪಿಯ ಪೇಸಿಎಸ್ ಅಭಿಯಾನಕ್ಕೆ ಅರ್ಥವೇ ಇಲ್ಲ. ಜನ ಇದನ್ನು ನಂಬುವುದಿಲ್ಲ. ಕಾಂಗ್ರೆಸ್ ನವರು ಮಾಡಿದ್ದನ್ನೇ ಕಾಪಿ ಮಾಡುವುದಕ್ಕೆ ಹೊರಟಿದ್ದಾರೆ. ಬಿಜೆಪಿ ಬಂದು ನಾಲ್ಕು ವರ್ಷಕ್ಕೆ ಅಭಿಯಾನ ಆರಂಭವಾಗಿತ್ತು. ಆದ್ರೆ ಈಗ ಕಾಂಗ್ರೆಸ್ ಬಂದು ಮೂರೇ ತಿಂಗಳಲ್ಲಿ ಅಭಿಯಾನ ಆರಂಭವಾಗುತ್ತೆ ಎಂದರೆ ಅದಕ್ಕೆ ಅರ್ಥವೇನು. ಬಿಕೆಪಿಯಲ್ಲಿದ್ದಾಗ ಎಲ್ಲಾ ವಿಚಾರವನ್ನು ನಾನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳುವುದಕ್ಕೆ ಆಗದೆ ಇರುವಂತ ವಿಚಾರವನ್ನು ಅಲ್ಲಿ ಹೇಳಿದ್ದೆ. ಆದ್ರೆ ಅವರು ತಿಳಿದುಕೊಳ್ಳಲಿಲ್ಲ. ಎಲ್ಲರದೂ ಒಂದೇ ಟಾರ್ಗೆಟ್ ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಎಂದ ಜಗದೀಶ್ ಶೆಟ್ಟರ್, ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಲೀಡರ್ ಲೆಸ್ ಪಾರ್ಟಿ ಆಗಿದೆ. ಮೂರು ತಿಂಗಳಾದ್ರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ. ಬಿಜೆಪಿ ದಯನೀಯ ಪರಸ್ಥಿತಿ ಬಗ್ಗೆಯೂ ಚರ್ಚೆ ಆಯ್ತು.
ನಾನು ನನಗೆ ಸೀಟ್ ಬೇಕು ಅಂತ ಎಲ್ಲಿಯೂ ಒತ್ತಡ ಹಾಕಿಲ್ಲ. ಹೈಕಮಾಂಡ್ ಕರೆದ ಹಿನ್ನೆಲೆ ನಾನು ದೆಹಲಿಗೆ ಹೋಗಿದ್ದೆ. ರಾಹುಲ್ ಗಾಂಧಿ ಬಳಿ ಮೂರು ಗಂಟೆಗಳ ಕಾಲ ಚರ್ಚೆ ಮಾಡಿದ್ದೆಮ ಲೋಕಸಭೆಯಲ್ಲಿ ನಾವೂ ಹೇಗೆ ಗೆಲ್ಲಬೇಕು ಎಂಬುದು ಚರ್ಚೆ ಆಗಿದೆ ಎಂದಿದ್ದಾರೆ.