ಬೆಂಗಳೂರು: ಚುನಾವಣೆ ಹತ್ತಿರವಿರುವಾಗಲೇ ಸಚಿವ ಶ್ರೀರಾಮುಲು ಬಿಜೆಪಿ ಮೇಲೆ ಮುನಿಸಿಕೊಂಡರಾ ಎಂಬ ಅನುಮಾನ ಶುರುವಾಗಿದೆ. ಈ ಅನುಮಾನ, ಚರ್ಚೆಗೆಲ್ಲಾ ಕಾರಣ, ಸಾರಿಗೆ ಇಲಾಖೆಯ ಸಚಿವರಾಗಿರುವ ಶ್ರೀರಾಮುಲು ತಮ್ಮ ಕ್ಷೇತ್ರದ ಅದರಲ್ಲೂ ಮುಖ್ಯವಾದ ಕಾರ್ಯಕ್ರಮಕ್ಕೆ ಗೈರಾಗಿರುವುದು ಇಷ್ಟೆಲ್ಲಾ ಚರ್ಚೆ, ಅನುಮಾನಕ್ಕೆ ಕಾರಣವಾಗಿದೆ.

ಸಚಿವ ಶ್ರೀರಾಮುಲು ಅವರು ಈ ಮೊದಲು ಆರೋಗ್ಯ ಇಲಾಖೆಯ ಸಚಿವರಾಗಿದ್ದರು. ಕೊರೊನಾ ಸಮಯದಲ್ಲಿ ಸಾರಿಗೆ ಇಲಾಖೆಗೆ ಸಚಿವರನ್ನಾಗಿ ನೇಮಿಸಿದರು. ಆದರೆ ಆ ಇಲಾಖೆ ಶ್ರೀರಾಮುಲುಗೆ ಇಷ್ಟವೇನು ಇರಲಿಲ್ಲ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ವಿರುದ್ಧವಾಗಿ ಮತ್ತೊಮ್ಮೆ ಶ್ರೀರಾಮುಲು ಅವರನ್ನೇ ಕಣಕ್ಕಿಳಿಸಲು ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಆದರೆ ಮೊಣಕಾಲ್ಮೂರು ಕ್ಷೇತ್ರದ ಶಾಸಕರಾಗಿರುವ ಶ್ರೀರಾಮುಲು ಬಳ್ಳಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಬಿಜೆಪಿ ಮಾತ್ರ ಇನ್ನು ಟಿಕೆಟ್ ಕನ್ಫರ್ಮ್ ಮಾಡಿಲ್ಲ.

ಈ ಎಲ್ಲಾ ಬೆಳವಣಿಗೆಗಳಿಂದ ಶ್ರೀರಾಮುಲು ಮುನಿಸಿಕೊಂಡರಾ ಎಂಬ ಪ್ರಶ್ನೆಗಳು ಎದ್ದಿವೆ. ಕೆಎಸ್ಆರ್ಡಿಸಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದುಬಾರಿ ಬಸ್ ಖರೀದಿ ಮಾಡಿದೆ. ಈ ಬಸ್ ಉದ್ಘಾಟನೆಗೂ ಶ್ರೀರಾಮುಲು ಬಂದಿರಲಿಲ್ಲ. ಈ ಮೂಲಕ ಬಿಜೆಪಿ ಮೇಲೆ ರಾಮುಲು ಮುನಿಸಿಕೊಂಡರಾ ಎಂಬ ಚರ್ಚೆಗಳು ಹರಿದಾಡುತ್ತಿವೆ.


