ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.23): ವಿಧಾನಪರಿಷತ್‍ನ 25 ಸ್ಥಾನಗಳಿಗೆ ಮುಂದಿನ ತಿಂಗಳು ಹತ್ತರಂದು ನಡೆಯುವ ಚುನಾವಣೆಯಲ್ಲಿ ಚಿತ್ರದುರ್ಗ-ದಾವಣಗೆರೆ ಕ್ಷೇತ್ರದಿಂದ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ನವೀನ್ ಮಂಗಳವಾರ ಸಾವಿರಾರು ಕಾರ್ಯಕರ್ತರು, ಮುಖಂಡರು ಹಾಗೂ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಅಭ್ಯರ್ಥಿ ಕೆ.ಎಸ್.ನವೀನ್ ಮತ್ತು ಮುಖಂಡರು ಆಗಮಿಸಿದಾಗ ರಸ್ತೆಯುದ್ದಕ್ಕೂ ಕಾರ್ಯಕರ್ತರು, ಅಭಿಮಾನಿಗಳು ಜಯಘೋಷಗಳನ್ನು ಕೂಗುತ್ತ ಸಾಗಿದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರು ಹಾಗೂ ಸಂಸದರು, ಶಾಸಕರುಗಳ ಮೇಲೆ ಅಭಿಮಾನಿಗಳು ಹೂಮಳೆಗೆರೆದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು. ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮ ಶ್ರೀನಿವಾಸ್, ಮಾಯಕೊಂಡ ಶಾಸಕ ಪ್ರೊ.ಲಿಂಗಪ್ಪ, ಜಗಳೂರು ಶಾಸಕ ರಾಮಚಂದ್ರ, ಹರಿಹರ ಮಾಜಿ ಶಾಸಕ ಹರೀಶ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ದಾವಣಗೆರೆ ಜಿಲ್ಲಾಧ್ಯಕ್ಷ ವೀರೇಶ್ ಅನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್, ರಾಜೇಶ್ ಬುರುಡೆಕಟ್ಟೆ, ಸುರೇಶ್ ಸಿದ್ದಾಪುರ, ಜಿ.ಎಸ್.ಅನಿತ್‍ಕುಮಾರ್, ರಘುಚಂದನ್, ಟಿ.ಜಿ.ನರೇಂದ್ರನಾಥ್, ಎಸ್.ಆರ್.ಗಿರೀಶ್, ಸಿದ್ದೇಶ್‍ಕಾಶಿ, ಶಂಕರಮೂರ್ತಿ, ಪ್ರಶಾಂತ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ವೆಂಕಟೇಶ್‍ಯಾದವ್, ಸಂಪತ್‍ಕುಮಾರ್, ಪ್ರವೀಣ್‍ಕುಮಾರ್, ನೆಲ್ಲಿಕಟ್ಟೆ ಜಗದೀಶ್, ರೇಖ, ನಂದಿನಾಗರಾಜ್, ಶೈಲಜಾರೆಡ್ಡಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಅನುರಾದ ರವಿಕುಮಾರ್, ಮಾಜಿ ಉಪಾಧ್ಯಕ್ಷೆ ಶ್ವೇತ ವೀರೇಶ್, ಕಾಂಚನ, ಚಂದ್ರಿಕ ಲೋಕನಾಥ್ ಸೇರಿದಂತೆ ಜಿಲ್ಲೆಯ ಮಂಡಲ ಅಧ್ಯಕ್ಷರು, ಕಾರ್ಯಕರ್ತರು, ಪದಾಧಿಕಾರಿಗಳು ಮೆರವಣಿಗೆಯಲ್ಲಿದ್ದರು.
ತಾಲ್ಲೂಕು ಕಚೇರಿ ರಸ್ತೆ, ಒನಕೆ ಓಬವ್ವ ವೃತ್ತ, ಕೋರ್ಟ್ ರಸ್ತೆ, ಅಂಬೇಡ್ಕ್‍ರ್ ಸರ್ಕಲ್, ಕೃಷ್ಣರಾಜೇಂದ್ರ ಗ್ರಂಥಾಲಯದ ಮುಂಭಾಗದ ರಸ್ತೆಯಲ್ಲಿ ನೂರಾರು ವಾಹನ, ಬೈಕ್‍ಗಳು ನಿಂತಿದ್ದವು.