ಕೊಪ್ಪಳ: ರಾಜಕೀಯ ಎಂದ ಮೇಲೆ ಅವರ ಮೇಲೆ ಇವರು ಇವರ ಮೇಲೆ ಅವರು ಕೆಂಡಕಾರುವುದು ಸಹಜ. ಒಬ್ಬರ ಮೇಲೆ ಒಬ್ಬರು ಆಕ್ರೋಶದ ತಿರುಗೇಟು ನೀಡುತ್ತಾ ಇರುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ವಿಷದ ನಾಗರಾಹಾವಿಗೆ ಹೋಲಿಕೆ ಮಾಡಿ, ನಂತರದಲ್ಲಿ ವಿಷಾಧ ವ್ಯಕ್ತಪಡಿಸಿದ್ದರು. ಇದೀಗ ಅದಕ್ಕೆ ಶಾಸಕ ಬಸನಗೌಡ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಯತ್ನಾಳ್, ಈ ಬಗ್ಗೆ ಮಾತನಾಡಿದ್ದು, ಖರ್ಗೆ ಸಾಹೇಬ್ರು ನಮ್ಮ ಮೋದಿ ಬಗ್ಗೆ ಒಂದು ಸ್ಟೇಟ್ ಮೆಂಟ್ ನೀಡಿದ್ದಾರೆ. ನಾಗರಹಾವು ಎಂದು ಮೋದಿ ಬಗ್ಗೆ ಮಾತಾಡ್ಯಾರ. ಮೋದಿ ಬಗ್ಗೆ ಹೀಗೆ ಮಾತನಾಡಿಯೇ ಗುಲ್ಬಾರ್ಗಾದಲ್ಲಿ ಏನಾಗಿತ್ತು. ಖರ್ಗೆ ಅವರು ಹಿರಿಯರಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ್ ಅಧ್ಯಕ್ಷರಾಗಿ ಹೆಂಗೆ ಮಾತನಾಡಬೇಕು ಎಂಬುದು ಗೊತ್ತೆ ಇಲ್ಲ. ಪ್ರಧಾನಿ ಮೋದಿಯನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ.
ಒಂದು ಕಾಲದಲ್ಲಿ ಅವರಿಗೆ ಅಮೆರಿಕಾದ ವೀಸಾ ನೀಡಿರಲಿಲ್ಲ. ಆದರೆ ಇಂದು ಅವರು ಅಮೆರಿಕಾಗೆ ಹೋಗ್ತಿದ್ದಾರೆ ಅಂದ್ರೆ ಭರ್ಜರಿ ಸ್ವಾಗತ ಮಾಡುತ್ತಾರೆ. ಇವತ್ತು ಮೋದಿ ಜಗತ್ತಿನ ನಾಯಕ. ಸೋನಿಯಾ ಗಾಂಧಿ ವಿಷಕನ್ಯೆ ಆಗಿದ್ರೆ..? ಪಾಕಿಸ್ತಾನ ಮತ್ತು ಚೀನಾ ದೇಶಗಳ ಏಜೆಂಟ್ ಆಗಿ ಕೆಲಸ ಮಾಡ್ತಾರೆ ಎಂದು ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.





GIPHY App Key not set. Please check settings