ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವಿಡಿಯೋಗೆ ಬಿಜೆಪಿ ಕೆಂಡಾಮಂಡಲರಾಗಿದ್ದಾರೆ. ಕಾರಣ ರಾಹುಲ್ ಗಾಂಧಿ ರುದ್ರಾಕ್ಷಿ ಮಾಲೆ ಧರಿಸಲು ನಿರಾಕರಿಸಿದ್ದು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರಖಂಡದ ರ್ಯಾಲಿಯೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕರ್ತರೊಬ್ಬರು ರುದ್ರಾಕ್ಷಿ ಮಾಲೆಯನ್ನ ರಾಹುಲ್ ಗಾಂಧಿಗೆ ನೀಡುತ್ತಾರೆ. ಆದ್ರೆ ರಾಹುಲ್ ಗಾಂಧಿ ಅದನ್ನ ಹಾಕಲು ಇಷ್ಟಪಡುವುದಿಲ್ಲ. ನಿರಾಕರಿಸುತ್ತಾರದ. ಇದು ಬಿಜೆಪಿಗರ ಕೋಪಕ್ಕೆ ಕಾರಣವಾಗಿದೆ.
कांग्रेस के चुनावी हिन्दू की हकीकत देख लीजिए। मंच पर मंत्रोच्चार चल रहा है और @RahulGandhi हाथ बांधे खड़े हैं। इतना ही नहीं जब इन्हें रुद्राक्ष की माला पहनाई जा रही थी तो इन्होंने साफ मना कर दिया।
संस्कार बोलते हैं pic.twitter.com/2R31LHTU0S— BJP Uttarakhand (@BJP4UK) December 17, 2021
ಈ ವಿಡಿಯೋ ಶೇರ್ ಮಾಡಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ತಾನೂ ಹಿಂದೂ ಎಂದು ಹೇಳಿಕೊಂಡು ತಿರುಗುವ ವ್ಯಕ್ತಿಗೆ ಈಗ ಧರ್ಮಾಭಿಮಾನ ಉಕ್ಕಿ ಹರಿದಿದೆ. ಚುನಾವಣೆಗೂ ಮುನ್ನವಷ್ಟೇ ದೇವಸ್ಥಾನಗಳ ನೆನಪಾಗುತ್ತೆ ಅಂತ ಕಿಡಿಕಾರಿದ್ದಾರೆ.
ಬಿಜೆಪಿಗರು ರಾಹುಲ್ ಗಾಂಧಿಯನ್ನ ಅದ್ಯಾವಾಗ ಟೀಕೆ ಮಾಡಿದ್ರೋ ಕಾಂಗ್ರೆಸ್ ಕೂಡ ಬಿಜೆಪಿಗೆ ತಿರುಗೇಟು ನೀಡಿದೆ. ಮೋದಿ ಗುಜರಾತ್ ಪ್ರವಾಸದಲ್ಲಿದ್ದಾಗ ಅಲ್ಲುನ ಮೌಲ್ವಿಯೊಬ್ಬರು ಮುಸ್ಲಿಮರು ಧರಿಸುವ ಟೋಪಿ ಕೊಟ್ಟಿದ್ದರು. ಅದನ್ನು ಅವರು ಧರಿಸಲೇ ಇಲ್ಲ ಎಂದು ಆ ವಿಡಿಯೋ ಹಾಕಿ ತಿರುಗೇಟು ನೀಡಿದೆ.