ಲಕ್ಷ್ಮಣ ಸವದಿ ಬಯಸಿದ್ದ ಟಿಕೆಟ್ ಬೇರೆ.. ಸಿಕ್ಕಿದ್ದೇ ಬೇರೆ..!

suddionenews
1 Min Read

ಜೂನ್ 3 ರಂದು ನಡೆಯುವ ಪರಿಷತ್ ಚುನಾವಣೆಗೆ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಈಗಾಗಲೇ ಪರಿಷತ್ ಸದಸ್ಯ ಸ್ಥಾನದಲ್ಲಿಯೇ ಇದ್ದು ಅವಧಿ‌ಮುಗಿಸಿದ ಲಕ್ಷ್ಮಣ ಸವದಿಗೂ ಬಿಜೆಪಿ ಮತ್ತೆ ಪರಿಷತ್ ಟಿಕೆಟ್ ಘೋಷಣೆ ಮಾಡಿದೆ. ಆದರೆ ಇದು ಸವದಿಗೆ ತೃಪ್ತಿ ತಂದಿಲ್ಲ.

ಯಾಕಂದ್ರೆ ಸವದಿ ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ನಿಂದ ಆಪರೆಷನ್ ಕಮಲದಿಂದ ಬಿಜೆಪಿಗೆ ಬಂದಿದ್ದ ಮಹೇಶ್ ಕುಮಟಳ್ಳಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅಥಣಿಯಿಂದಲೇ ಸ್ಪರ್ಧೆ ಮಾಡುವ ಕನಸು ಕಂಡಿದ್ದರು. ಇದೀಗ ಪರಿಷತ್ ಟಿಕೆಟ್ ನೀಡಿದ್ದು, ಅವರ ಬೇಸರಕ್ಕೆ ಕಾರಣವಾಗಿದೆ. ಸದ್ಯ ಜೂನ್ 3 ರಂದು ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *