ಡಿಯರ್ ಕಾಂಗ್ರೆಸ್.. ಎದ್ದೇಳಿ.. ಕಾಫಿಯ ವಾಸನೆ ತೆಗೆದುಕೊಳ್ಳಿ : ಕಾಂಗ್ರೆಸ್ ವಿರುದ್ಧ ಬಿಜೆಪಿ ಕುಟುಕು..!

2 Min Read

 

 

ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ ಲೇವಡಿ ಶುರುವಾಗಿದೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಟ್ವಿಟ್ಟರ್ ನಲ್ಲಿಯೇ ಕಿತ್ತಾಡುತ್ತಿದ್ದಾರೆ.

 

 

ಇದೀಗ ಬಿಜೆಪಿ ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಿ ನೆಹರು ಹಾಗೂ @INCIndia ಕಾಲಕ್ಕೂ, @narendramodi ಅವರ ನೇತೃತ್ವದ NDA ಕಾಲಕ್ಕೂ ಭಾರತ ಕಂಡ ಅಜಗಜಾಂತರ ವ್ಯತ್ಯಾಸ..!

* 2013ರ ಮೊದಲು ಮನಮೋಹನ್ ಸಿಂಗ್ ಅವರ ಸರ್ಕಾರ ಇಸ್ರೋಗೆ ಕೊಟ್ಟ ಅನುದಾನ ಕೇವಲ 5,615 ಕೋಟಿ ರೂ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನೀಡಿದ್ದು ಬರೋಬ್ಬರಿ 12,543 ಕೋಟಿ‌ ರೂ..!

* ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ನಮ್ಮ ದೇಶ ಲ್ಯಾಂಡ್ ಲೈನ್ ಫೋನ್ ಕೂಡ ತಯಾರಿಸುತ್ತಿರಲಿಲ್ಲ. ಈಗ ಭಾರತದಲ್ಲಿ ಮಾರಾಟವಾಗುವ ಶೇ‌.98 ರಷ್ಟು ಸ್ಮಾರ್ಟ್ ಫೋನ್‌ಗಳು ಮೇಡ್ ಇನ್ ಇಂಡಿಯಾ.

* ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಆಹಾರ ಧಾನ್ಯಕ್ಕಾಗಿ ಭಾರತ ಅಮೆರಿಕದ ಬಾಗಿಲು ಬಡಿಯುತ್ತಿತ್ತು‌. ಇಂದು ಉಪಗ್ರಹಗಳನ್ನು ಹಾರಿಸಲು ಅಮೆರಿಕದ ಕಂಪನಿಗಳು ಇಸ್ರೋ ಬಾಗಿಲು ಬಡಿಯುತ್ತಿವೆ.

* ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಭಾರತದ ವಾರ್ಷಿಕ ಪ್ರಗತಿ 2.5 ಪರ್ಸೆಂಟ್ ಇತ್ತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾಲದಲ್ಲಿ 8.5 ಪರ್ಸೆಂಟ್ ಬೆಳವಣಿಗೆ ಕಂಡಿದೆ..!

* ಕಾಂಗ್ರೆಸ್ ಕಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು 2 ಲಕ್ಷ ಕೋಟಿ ರೂ. ನಷ್ಟದಲ್ಲಿದ್ದವು. ಈಗ 1.7 ಲಕ್ಷ ಕೋಟಿ ರೂ. ಲಾಭದಲ್ಲಿವೆ..!

* ನೆಹರು ಅವರ ಕಾಲದಲ್ಲಿ ಸೊನ್ನೆ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕೇವಲ 600 ಕೋಟಿ ರೂ. ಇದ್ದ ರಕ್ಷಣಾ ಸಾಮಾಗ್ರಿ ರಫ್ತು ವಹಿವಾಟು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾಲದಲ್ಲಿ 16 ಸಾವಿರ ಕೋಟಿ ರೂ.ಗೆ ತಲುಪಿದೆ‌.

* 1947 – 2014ರ ವರೆಗಿನ ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ
ಐಐಟಿ- 16, ಐಐಎಂ – 13, ಐಐಐಟಿ – 9
2014ರ ನಂತರ ಪ್ರಧಾನಿ ಮೋದಿ ಅವರ ನೇತೃತ್ವದ ಭಾರತದ ಕಾಲದಲ್ಲಿ ಐಐಟಿ – 23, ಐಐಎಂ – 20, ಐಐಐಟಿ – 25!

* 1961ರಲ್ಲಿ ನೆಹರು ಅವರ ತಮ್ಮ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುತ್ತಿದ್ದರು ಆದರೆ ಇಸ್ರೋ ವಿಜ್ಞಾನಿಗಳು ಸೈಕಲ್‌ನಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಬೇಕಾದ ದುಸ್ಥಿತಿ ಇತ್ತು..!

Dear Congress, wake up and smell the coffee! ಎಂದು ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *