ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರ ಜೋರು ಸದ್ದು ಮಾಡ್ತಿದೆ. ಸಿಎಂ ಬೊಮ್ಮಾಯಿಗೆ ಸಿಎಂ ಸ್ಥಾನಕ್ಕೆ ಬುಟ್ ಕಾಯಿನ್ ಕುತ್ತು ತರೋದು ಗ್ಯಾರಂಟಿ ಅಂತ ಅತ್ತ ಕಾಂಗ್ರೆಸ್ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ನವರು ಬಿಜೆಪಿ ಮೇಲೆ ಅಸ್ತ್ರ ಬಳಸುತ್ತಲೇ ಇರುವಾಗ, ತನಿಖೆಯಲ್ಲಿ ಕಾಂಗ್ರೆಸ್ ಗೆ ಮುಳುವಾಗುವಂತ ಮಾಹಿತಿಯೊಂದು ಲಭ್ಯವಾಗಿದೆ ಎನ್ನಲಾಗಿದೆ.
ಈಗಾಗಲೇ ಶ್ರೀಕಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಆತನನ್ನ ಬಿಡುಗಡೆ ಮಾಡಲಾಗಿದೆ. ಶ್ರೀಕಿ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಈ ಮಧ್ಯೆ ಶ್ರೀಕಿ ಜೊತೆ ನಲಪಾಡ್ ಕಾಂಟ್ಯಾಕ್ಟ್ ನಲ್ಲಿದ್ದ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
ಹ್ಯಾರೀಸ್ ಎರಡನೇ ಮಗ ಉಮರ್ ನಲಪಾಡ್ ಹಾಗೂ ಶ್ರೀಕಿಗೆ ನಂಟಿದೆಯಂತೆ. ಇಬ್ಬರು ಒಂದೇ ಪ್ಲೈಟ್ ನಲ್ಲಿ ಓಡಾಡಿದ್ದನ್ನ ಮತ್ಗೊಬ್ಬ ಆರೋಪಿ ರಾಬಿನ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ದೆಹಲಿ, ಜೈಪುರ ಸೇರಿದಂತೆ ಹಲವೆಡೆ ಜೊತೆಯಲ್ಲೆ ಓಡಾಟ ನಡೆಸಿದ್ದರಂತೆ. ಅಷ್ಟೇ ಅಲ್ಲ ದೆಹಲಿಯ ಶಾಂಘ್ರಿಲಾದಲ್ಲಿ ಒಟ್ಟಿಗೆ ತಂಗಿದ್ದರಂತೆ.