ಬಿಪಿನ್ ರಾವತ್ ಗೆ ಅಂತಿಮ ನಮನ ಸಲ್ಲಿಕೆ

ನವದೆಹಲಿ: ತಮಿಳುನಾಡಿನ ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ನಿಧನರಾದರು. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತಿಮ ಸಂಸ್ಕಾರ ಇಂದು ಸಂಜೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ದೆಹಲಿಯ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಅದಕ್ಕೂ ಮುನ್ನ ಈಗಾಗಲೆ ಬಿಪಿನ್ ರಾವತ್ ಅವರ ಪಾರ್ಥಿವ ಶರೀರ ಅಂತಿಮ ದರ್ಶನವನ್ನ ಸಾಕಷ್ಟು ಜನ ಮಾಡಿದ್ದಾರೆ. ಇಂದು ಕಾಮ್ ರಾಜ್ ಮಾರ್ಗ ನಲ್ಲಿರುವ ಅವರ ನಿವಾಸದಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿಯ ಪಾರ್ಥಿವ ಶರೀರವನ್ನ ಇಡಲಾಗಿದೆ. ನಿವಾಸಕ್ಕೆ ಹಲವು ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

ರಕ್ಷಣಾ ಸಚುವ ರಾಜ್ ನಾಥ್ ಸಿಂಗ್, ಗೃಹಸಚಿವ ಅಮಿತ್ ಶಾ, ಎನ್ಎಸ್ಎ ಮುಖ್ಯಸ್ಥ ಅಜಿತ್ ಧೋವಲ್, ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸೇರಿದಂತೆ ಇನ್ನು ಅನೇಕ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ 12.30ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿದ್ದಯ, ಆ ಬಳಿಕ ಸೇನಾ ಸಿಬ್ಬಂದಿಯಿಂದ ಗೌರವ ಸಲ್ಲಿಕೆಯಾಗಲಿದೆ. ಬಳಿಕ ನಿವಾಸದಿಂದ ಬಿಪಿನ್ ರಾವತ್ ಹಾಗೂ ಅವರ ಪತ್ನಿಯ ಅಂತಿಮ ಯಾತ್ರೆ ಪ್ರಾರಂಭವಾಗಲಿದೆ. ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ.

Share This Article
Leave a Comment

Leave a Reply

Your email address will not be published. Required fields are marked *