ಚಿತ್ರದುರ್ಗ, (ಅ.26) : ಇದೇ ತಿಂಗಳ 31 ರಂದು ನಗರದಲ್ಲಿ ನಡೆಯಲಿರುವ ಬುದ್ದ ಧಮ್ಮ ದೀಕ್ಷಾದ ಪ್ರಯುಕ್ತ ಬುದ್ದ ಧಮ್ಮ ದೀಕ್ಷಾ ಉತ್ಸವ ಸಮಿತಿ ಹಾಗೂ ಜೈಭೀಮ್ ಕಾರ್ಯಕರ್ತರ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಬೈಕ್‍ರ್ಯಾಲಿ ನಡೆಯಿತು.
ಸ್ಟೇಡಿಯಂ ಮುಂಭಾಗ ನಿರ್ಮಿಸಲಾಗಿರುವ ಬುದ್ದನ ಪ್ರತಿಮೆ ಬಳಿಯಿಂದ ಹೊರಟ ಬೈಕ್ ರ್ಯಾಲಿ ಜಟ್‍ಪಟ್‍ನಗರ, ಜೋಗಿಮಟ್ಟಿ ರಸ್ತೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಡಿ.ಸಿ.ಸರ್ಕಲ್, ಕೃಷ್ಣಪ್ಪ ಸರ್ಕಲ್, ಜೆ.ಸಿ.ಆರ್. ಮೂಲಕ ಸಾಗಿ ಅಂಬೇಡ್ಕರ್ ಪ್ರತಿಮೆ ಸಮೀಪ ಕೊನೆಗೊಂಡಿತು.
ಒನಕೆ ಓಬವ್ವ ವೃತ್ತದಲ್ಲಿ ಬೈಕ್‍ರ್ಯಾಲಿ ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ 31 ರಂದು ಮಹಾಬೋಧಿ ಸಂಸ್ಥೆ ಕಾರ್ಯದರ್ಶಿ ಬೆಂಗಳೂರಿನ ಆನಂದ ಬಂತೇಜಿ ಬುದ್ದನ ಪ್ರತಿಮೆಗೆ ಪುಷ್ಪಾಚರಣೆ ಅರ್ಪಿಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ತ.ರಾ.ಸು.ರಂಗಮಂದಿರದಲ್ಲಿ ಧಮ್ಮ ದೀಕ್ಷೆ ನೀಡಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಅಂದು ಸುಮಾರು ನೂರು ಮಂದಿ ಧಮ್ಮ ದೀಕ್ಷೆ ಪಡೆಯಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಮ್ಮ ದೀಕ್ಷೆ ಸ್ವೀಕರಿಸುವಂತೆ ಮನವಿ ಮಾಡಿದರು.
ಪ್ರಾಚಾರ್ಯರಾದ ಬಿ.ಪಿ.ತಿಪ್ಪೇಸ್ವಾಮಿ, ನಿವೃತ್ತ ಪ್ರಾಚಾರ್ಯರಾದ ಸಿ.ಕೆ.ಮಹೇಶ್, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ಟಿ.ರಾಮು, ಜಿ.ಎಸ್.ಶರಣಪ್ಪ, ನಗರಸಭೆ ಸದಸ್ಯ ಅಂಗಡಿ ಮಂಜಣ್ಣ, ಭೀಮ್‍ಆರ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಅವಿನಾಶ್, ಜೈಬೀಮ್‍ನ ತಮ್ಮಣ್ಣ, ಶ್ರೀನಿವಾಸ್ ಇನ್ನು ಮುಂತಾದ ಸಮಾನ ಮನಸ್ಕರು ಬೈಕ್‍ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.