ಭರಮಸಾಗರ ಬಳಿ ರಸ್ತೆ ಅಪಘಾತ ; ಓರ್ವ ಸಾವು

0 Min Read

ಚಿತ್ರದುರ್ಗ, (ಫೆ. 09): ರಸ್ತೆ ಬದಿಯ ಚರಂಡಿ ಬಂಡೆಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ ಭರಮಸಾಗರ ಸಮೀಪದ ಕೋಳಾಳ್ ಫುಡ್ ಫ್ಯಾಕ್ಟರಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.

ಬೆಂಗಳೂರಿನ ರೇಣುಕಾ ಪ್ರಸಾದ್ (22) ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಬೈಕಿನಲ್ಲಿದ್ದ ಕವನಾ ಎಂಬ ಯುವತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗದಗದಿಂದ ಬೆಂಗಳೂರಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ಸಂಭವಿಸಿದೆ.

ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *