ಕಿಚ್ಚ ಸುದೀಪ್ ನಡೆಸಿಕೊಡುವ ಪಂಚಾಯ್ತಿಯಲ್ಲಿ ತಪ್ಪದೆ ಎಸ್ ಆರ್ ನೋ ರೌಂಡ್ ಇದ್ದೆ ಇರುತ್ತದೆ. ಪ್ರತಿ ಸೀಸನ್ ನಲ್ಲೂ ಈ ರೌಮನಡ್ ಮಾಡಿಕೊಂಡು ಬರುತ್ತಾರೆ. ಸ್ಪರ್ಧಿಗಳ ನಡವಳಿಕೆ ಮೇಲೆ ಪ್ರಶ್ನೆಯನ್ನ ಕೇಳ್ತಾರೆ. ಮನೆ ಮಂದಿಗೆ ಅವರ ಮೇಲಿರುವ ಅಭಿಪ್ರಾಯವನ್ನ ಆ ರೌಂಡ್ ಮೂಲಕ ಅರ್ಥ ಮಾಡಿಸುತ್ತಾರೆ. ಆದರೆ ಕೆಲವರಿಗೆ ಅದು ಅರ್ಥವೇ ಆಗುವುದಿಲ್ಲ.
ಎಲ್ಲರ ಕೈಗೂ ಬೋರ್ಡ್ ಗಳನ್ನ ಕೊಟ್ಟು, ಚೈತ್ರಾ ಬಗ್ಗೆ ಪ್ರಶ್ನೆ ಕೇಳಲಾಯ್ತು. ಈ ಮನೆಗೆ ಬೇಡದ ವ್ಯಕ್ತಿ ಚೈತ್ರಾ ಎಂಬ ಪ್ರಶ್ನೆಯನ್ನು ಕಿಚ್ಚ ಸುದೀಪ್ ಕೇಳುತ್ತಾರೆ. ಇದಕ್ಕೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಪ್ರಶ್ನೆಗೆ ಉತ್ತರ ನಿರೀಕ್ಷಿಸಿದ್ದ ಸುದೀಪ್, ರಜತ್ ಕಡೆಯಿಂದ ಎಸ್ ಎಂದೇ ಬರುತ್ತೆ ಎಂದು ವೀಕ್ಷಕರು ಬಯಸುತ್ತಿದ್ದರು. ಆದರೆ ರಜತ್ ಸೆಕೆಂಡ್ ಕಾದು ಆಮೇಲೆ ನೋ ಎಂಬ ಉತ್ತರ ತೋರಿಸಿದರು. ಇದು ಸುದೀಪ್ ಅವರಿಗೂ ಶಾಕ್ ಆಗಿತ್ತು. ಯಾಕಂದ್ರೆ ರಜತ್ ಸಿಕ್ಕಾಪಟ್ಟೆ ರೇಗಿಸುವುದು ಚೈತ್ರಾ ಅವರನ್ನೇ. ತಮ್ಮ ಬಾಸ್ ಬಾಸ್ ಅಂತ ಹೇಳಿ ಹೇಳಿ ರೇಗಿಸುತ್ತಾನೇ ಇರುತ್ತಾರೆ. ಹೀಗಾಗಿ ರಜತ್ ಏನು ಉತ್ತರ ಕೊಡಬಹುದು ಎಂಬ ಕುತೂಹಲವಿತ್ತು.
ರಜತ್ ನೋ ಎಂಬ ಆಪ್ಶನ್ ತೋರಿಸಿದಾಗ ಕಿಚ್ಚ ಶಾಕಿಂಗ್ ರಿಯಾಕ್ಷನ್ ಕೊಟ್ರು. ಅದಕ್ಕೆ ರಜತ್ ಕೊಟ್ಟ ಉತ್ತರ ‘ಬಿಗ್ ಬಾಸ್ ಮನೆಗೆ ಚೈತ್ರಾ ಬಹಳ ಮುಖ್ಯ ಸರ್. ಯಾವಾಗ ಹೇಗಿರಬೇಕು, ಕ್ಯಾಮರಾ ಎಲ್ಲಿದೆ, ಅಲ್ಲಿ ಹೇಗಿರಬೇಕು ಎಂಬುದೆಲ್ಲ ಗೊತ್ತು. ಬಿಗ್ ಬಾಸ್ ಅನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರೋದು ಚೈತ್ತಾ ಮಾತ್ರ. ಆದ್ರೆ ಶನಿವಾರ ಮಾತ್ರ ಲಿಪ್ ಸ್ಟಿಕ್ ಹಾಕಿ ಬರೋಲ್ಲ’ ಎಂದು ಬೇಸರ ಹೊರ ಹಾಕಿದ್ದಾರೆ.