ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಕ್ಕಾಲು ಭಾಗ ಜರ್ನಿ ಮುಗಿಸಿದೆ. ಆದರೆ ಒಬ್ಬರಿಗೊಬ್ಬರ ನಡುವೆ ಬಾಂಧವ್ಯ, ಪ್ರೀತಿ, ನಿಸ್ಚಾರ್ಥ ಸ್ನೇಹ ಬೆಳೆಯುವುದಕ್ಕಿಂತ ಹೆಚ್ಚಾಗಿ ಬೇಳೆ ಬೇಯಿಸಿಕೊಳ್ಳಲು ಕ್ಲೋಸ್ ಆಗಿದ್ದೇ ಹೆಚ್ಚಾಗಿದೆ. ಇಂದು ಕೂಡ ನಾಮಿನೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ನಂಬಿಕೆ ಇಟ್ಟಾಗ ಹೇಳಿದ ಮಾತುಗಳು ಎಲ್ಲರ ಮುಂದೆ ಹರಾಜಾಗಿವೆ.
ಇಂದು ನಾಮಿನೇಷನ್ ಗಾಗಿ ಬಿಗ್ ಬಾಸ್ ಹೊಸದೊಂದು ಟಾಸ್ಕ್ ನೀಡಿತ್ತು. ಯಾರನ್ನ ನಾಮಿನೇಷನ್ ಮಾಡಬೇಕೋ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಸೂಕ್ತ ಕಾರಣವನ್ನು ನೀಡಬೇಕು. ಈ ಟಾಸ್ಕ್ ವೇಳೆ ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರ ನಡುವೆ ದೊಡ್ಡ ಗಲಾಟೆಯೇ ಎದ್ದಿದೆ. ಈ ವೇಳೆ ಮನೆಯವರ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದರು ಎಂಬುದು ಬಯಲಾಗಿದೆ.
ಮಾತಿನ ಬರದಲ್ಲಿ ಚೈತ್ರಾ, ನೀನು ಮೋಕ್ಷಿತಾಗೆ ಸೈಕೋ ಅಂದ್ಯಲ್ಲಾ ಎಂದಿದ್ದಾರೆ. ಆಗ ಮೋಕ್ಷಿತಾ ಶಾಕ್ ಆಗಿದ್ದಾರೆ. ಕೋಪ ಮಾಡಿಕೊಂಡ ತ್ರಿವಿಕ್ರಮ್, ನೀನು ಶಿಶಿರ್ ಹೆಣ್ಣು ಮಕ್ಕಳ ಹಿಂದೆ ಓಡಾಡುವ ಜೊಲ್ಲಾ ಅಂತ ಹೇಳಿದೆ ಎಂದಿದ್ದಾರೆ. ಆಗ ಚೈತ್ರಾ, ನಾನು ಆ ರೀತಿ ಹೇಳಿದ್ರೆ ನನ್ನ ನಾಲಿಗೆ ಬಿದ್ದು ಹೋಗ್ಲಿ ಎಂದಿದ್ದಾರೆ. ಅದಕ್ಕೆ ತ್ರಿವಿಕ್ರಮ್, ಅವರನ್ನ ನಂಬಬೇಡಿ ಬ್ರದರ್ ಎಂದಿದ್ದಾರೆ.
ಇಬ್ಬರು ನಾನು ಹೇಳಿಲ್ಲ ಅಂತಾನೇ ಕಿತ್ತಾಡಿಕೊಂಡಿದ್ದಾರೆ. ಆದರೆ ಇದನ್ನು ಕೇಳಿಸಿಕೊಂಡ ಶಿಶಿರ್ ಗೆ ಶಾಕ್ ಆಗಿದೆ. ಮೊದಲು ಜಗಳ ಆಡುವುದನ್ನು ನಿಲ್ಲಿಸಿ, ನಂಗೆ ಇದಕ್ಕೆ ಕ್ಲಾರಿಟಿ ಬೇಕು. ಇಲ್ಲಿ ಮಾನ ಮರ್ಯಾದೆ ಕಳೆದುಕೊಳ್ಳುವುದಕ್ಕೆ ಬಂದಿಲ್ಲ. ಕ್ಲಾರಿಟಿ ಸಿಗುವ ತನಕ ಇಲ್ಲಿಂದ ಹೋಗಲ್ಲ ಎಂದು ಆಕ್ರೋಶಗೊಂಡಿದ್ದಾರೆ.