2ನೇ ವಿಮಾನ ನಿಲ್ದಾಣದ ಬಿಗ್ ಅಪ್ಡೇಟ್ : ಟಾಪ್ ಲೀಸ್ಟ್ ನಲ್ಲಿ ತುಮಕೂರು, ನೆಲಮಂಗಲ..!

suddionenews
1 Min Read

ಬೆಂಗಳೂರು: ಎರಡನೇ ಅಂತರಾಷ್ಟ್ರೀಯ ನಿಲ್ದಾಣವಾಗಬೇಕು ಎಂದು ತೀರ್ಮಾನವಾದಾಗಿನಿಂದ ಸ್ಥಳ ನಿಗದಿಯದ್ದೇ ಬಹಳಷ್ಟು ಚರ್ಚೆಯಾಗುತ್ತಿದೆ. ಇದೀಗ ಆ ಬಗ್ಗೆ ಒಂದು ಬಿಗ್ ಅಪ್ಡೇಟ್ ಹೊರ ಬಿದ್ದಿದ್ದು, ಟಾಪ್ ಲೀಸ್ಟ್ ರೆಡಿಯಾಗಿದೆ. ಅದರಲ್ಲಿ ತುಮಕೂರು, ನೆಲಮಂಗಲ ಟಾಪ್ ಲೀಸ್ಟ್ ನಲ್ಲಿವೆ.

ಈ ಸಂಬಂಧ ಮಾತನಾಡಿರುವ ತುಮಕೂರು ಸಂಸದ ವಿ.ಸೋಮಣ್ಣ, ತುಮಕೂರು ಜಿಲ್ಲೆಯಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬುದು ನನ್ನ ಮೊದಲ ಸಲಹೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಸೌಲಭ್ಯವನ್ನು ಬೆಂಗಳೂರಿನಲ್ಲಿ ಒದಗಿಸಬೇಕು. ಇದಕ್ಕಾಗಿ ಹಳೆ ಹೆಚ್ಎಎಲ್ ವಿಮಾನ ನಿಲ್ದಾಣವನ್ನು ಅಭಿವೃದ್ದಿ ಪಡಿಸಿ ಬಳಸಿಕೊಳ್ಳಬೇಕು. ತುಮಕೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು.

ಬೆಂಗಳೂರಿನ ನಂತರ ತುಮಕೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ದಾಬಸ್ ಪೇಟೆ ಅಥವಾ ನೆಲಮಂಗಲದಲ್ಲಿಯೇ ನಿರ್ಮಿಸಲಿ. ಈ ವಿಷಯದಲ್ಲಿ ನಮಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಇದಕ್ಕಾಗಿ ರಾಜ್ಯ ಸರ್ಕಾರ ಬೇರೆ ಸ್ಥಳವನ್ನು ಆಯ್ಕೆ ಮಾಡಬಾರದು. ಈ ಸಂಬಂಧ ರಾಜ್ಯವಸರ್ಕಾರಕ್ಕೆ ಇದೇ ವಾರ ಪತ್ರ ಬರೆಯಲಾಗುವುದು ಎಂದಿದ್ದಾರೆ. ದಿನೇ ದಿನೇ ಬೆಂಗಳೂರು ಕೂಡ ಬೆಳೆಯುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣ ಮುಂದಿನ ದಿನಗಳಲ್ಲಿ ಜನಸಂದಣಿಯನ್ನು ಅನುಭವಿಸಬಹುದು. ಹೀಗಾಗಿ ರಾಜ್ಯ ಸರ್ಕಾರ ಈಗಲೇ ಆ ಬಗ್ಗೆ ಯೋಚಿಸಿ, ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯೋಜನೆ ಹಾಕಿದೆ. ಈಗ ಜಾಗವನ್ನ ಯಾವುದು ಫೈನಲ್ ಮಾಡಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಹೊಸೂರು ಕಡೆಗೆ ನಿಲ್ದಾಣ ಮಾಡಿ ಎಂಬ ಬೇಡಿಕೆಯೂ ಇದೆ.

Share This Article
Leave a Comment

Leave a Reply

Your email address will not be published. Required fields are marked *