ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿಂದ ಮೂವರು ರೋಗಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರ ಬಹಿರಂಗವಾಗಿದೆ. ಈ ಘಟನೆಯಿಂದೆ ನಿರ್ದೇಶಕರ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ. ಈ ಸಂಬಂಧ ವಿಮ್ಸ್ ನಿರ್ದೇಶಕರೇ ಬೇಸರ ಹೊರ ಹಾಕಿದ್ದಾರೆ.
ನನ್ನ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆ. ಕರೆಂಟ್ ಹೋದ ಮೇಲೆ ಯಾರ್ಯಾರು ಫೋನ್ ಮಾಡಿ ಏನೇನು ಮಾತನಾಡಿದ್ದಾರೆ ಎಂಬುದನ್ನು ಕಲೆ ಹಾಕುತ್ತಿದ್ದೇನೆ. ರೋಗಿಗಳು ಸತ್ತ ಬಳಿಕ ಶವವಿಟ್ಟು ಪ್ರತಿಭಟನೆ ಮಾಡುವುದಕ್ಕೂ ಫ್ಲ್ಯಾನ್ ಮಾಡಿದ್ದರು. ನನ್ನ ವಿರುದ್ಧವೇ ಷಡ್ಯಂತ್ರ ನಡೆದಿದೆ ಎಂದು ನಿರ್ದೇಶಕ ಗಂಗಾಧರಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇನ್ನು ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಇನ್ನು ನಿರ್ದೇಶಕರ ನೇಮಕದ ವಿಚಾರಕ್ಕೆ ವೈದ್ಯಕೀಯ ಸಚಿವ ಸುಧಾಕರ್ ಮಾತನಾಡಿದ್ದು, ನೇಮಕಾತಿ ಕಾನೂನು ರೀತಿಯೇ ಆಗಿದೆ. ವಂಟಿಲೇಟರ್ ಇಲ್ಲದೆ ಸಾವನ್ನಪ್ಪಿದ್ದಾರೆ ಎಂಬುದನ್ನು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ಅರ್ಹರನ್ನು ಸಂದರ್ಶನದ ಮೂಲಕವೇ ನೇಮಕಾತಿ ಮಾಡಲಾಗಿದೆ. ನಿರ್ದೇಶಕರನ್ನು ಸುಧಾಕರ್ ನೇಮಕ ಮಾಡಿಲ್ಲ ಎಂದಿದ್ದಾರೆ.