ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಯಲ್ ಶುರುವಾಗಿದೆ. ಇದರ ನಡುವೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆಯ ಸಂದರ್ಭದಲ್ಲಿ ರತ್ನಪ್ರಭಾ ಉಲ್ಟಾ ಹೊಡೆದಿದ್ದಾರೆ. ರೇಣುಕಾಸ್ವಾಮಿ ಅವರ ತಂದೆ – ತಾಯಿ ಮುಖ್ಯ ಸಾಕ್ಷಿದಾರರಾಗಿದ್ದಾರೆ. ಈ ಸಂಬಂಧ ಕೋರ್ಟ್ ಅವರನ್ನು ಮೊದಲೇ ಕರೆಸಿತ್ತು. ಕೇಸ್ ನಡೆಯುವಾಗ ರತ್ನಪ್ರಭಾ ಉಲ್ಟಾ ಹೊಡೆದಿದ್ದಾರೆ.
ಪೊಲೀಸರ ವಿಚಾರಣೆಯ ವೇಳೆ ಏನನ್ನ ಹೇಳಿರುತ್ತಾರೋ ಅದನ್ನೇ ಕೋರ್ಟ್ ನಲ್ಲೂ ಹೇಳಬೇಕಾಗುತ್ತದೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಮೊದಲು ಹೇಳಿದ್ದು ಒಂದಾದರೆ ಕೋರ್ಟ್ ನಲ್ಲಿ ಹೇಳ್ತಾ ಇರೋದೆ ಬೇರೆಯಾಗಿದೆ. ಈ ಮೂಲಕ ಈ ಹಿಂದೆ ಅವರು ನೀಡಿದ ಹೇಳಿಕೆಗೂ ಈಗ ಅವರು ನೀಡುತ್ತಿರುವ ಹೇಳಿಕೆಗೂ ಬಹಳ ವ್ಯತ್ಯಾಸಗಳು ಕಂಡು ಬರುತ್ತಿವೆ.
ಸಿವಿ ನಾಗೇಶ್ ಅವರು ಕ್ರಾಸ್ ಎಕ್ಸಾಮಿನೇಷನ್ ಮಾಡುವಾಗ ಉಲ್ಟಾ ಹೊಡೆದಿದ್ದಾರೆ. ಈ ಹಿನ್ನೆಲೆ ಪ್ರತಿಕೂಲ ಸಾಕ್ಷಿಯನ್ನಾಗಿ ರತ್ನಪ್ರಭಾ ಅವರನ್ನ ಪರಿಗಣಿಸುವಂತೆ ಅರ್ಜಿಯನ್ನು ಹಾಕಲಾಗಿದೆ. ಈ ಸಂಬಂದ ಅರ್ಜಿಯನ್ನ ಕೋರ್ಟ್ ವಿಚಾರಣೆ ನಡೆಸಲಿದೆ. ಜೊತೆಗೆ ರತ್ನಪ್ರಭಾ ಅವರು ಇಲ್ಲಿ ಪ್ರತ್ಯಕ್ಷ ಸಾಕ್ಷಿ ಅಲ್ಲ, ಸಾಂದರ್ಭಿಕ ಸಾಕ್ಷಿ ಅಷ್ಟೇ. ಕಿಡ್ನ್ಯಾಪ್ ಆಗಿದ್ದು ನಿಜನಾ ಅಲ್ವಾ ಎಂಬುದಕ್ಕೆ ರತ್ನಪ್ರಭಾ ಅವರ ಹೇಳಿಕೆ ಬಹಳ ಮುಖ್ಯವಾಗುತ್ತೆ. ಜೊತೆಗೆ ಆರೋಪಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ಇಂದು ಅರ್ಜಿ ವಿಚಾರಣೆ ನಡೆಸಲಿರುವ ಕೋರ್ಟ್ ರತ್ನಪ್ರಭಾ ಅವರನ್ ಯಾವ ರೀತಿಯ ಸಾಕ್ಷಿಯಾಗಿ ಪರಿಗಣಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ. ಸದ್ಯಕ್ಕಂತು ರತ್ನಪ್ರಭಾ ಅವರು ಅಂದು ಹೇಳಿದ್ದೇ ಬೇರೆ ಇಂದು ಹೇಳ್ತಿರೋದೆ ಬೇರೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.






