ರಾಜಕೀಯ ಜೀವನದಿಂದ ಸಿನಿಮಾ ರಂಗವನ್ನು ದೂರ ಮಾಡಿಕೊಂಡಿದ್ದ ರಮ್ಯಾ ಮರಳಿ ಗೂಡು ಸೇರಿದ್ದಾರೆ. ಇದೀಗ ಮತ್ತೆ ರಮ್ಯಾ ಚಿತ್ರರಂಗದಲ್ಲಿಯೇ ಆಕ್ಟೀವ್ ಆಗಿದ್ದಾರೆ. ತಮ್ಮದೇ ನಿರ್ಮಾಣದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾಗೆ ರಮ್ಯಾ ಬಂಡವಾಳ ಹೂಡಿದ್ದಾರೆ.
ಆಪಲ್ ಕಂಪನಿ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮಾಡಿದ್ದಾರೆ. ಬಳಿಕ ಆ ಸಿನಿಮಾದ ಟೈಟಲ್ ನನ್ನದು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ನಲ್ಲಿ ತೀರ್ಪು ರಮ್ಯಾ ಪರವಾಗಿಯೇ ಬಂದಿದೆ.
ಸಿಟಿ ಸಿವಿಲ್ ಕೋರ್ಟ್ ನಲ್ಲಿ ರಾಜೇಂದ್ರ ಸಿಂಗ್ ಬಾಬು ಅರ್ಜಿ ವಜಾಗೊಂಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪರಿಶೀಲನೆ ನಡೆಸಿದಾಗ ರಾಜೇಂದ್ರ ಸಿಂಗ್ ಬಾಬು ಅವರ ಹೆಸರಲ್ಲಿ ಇರಲಿಲ್ಲ. ಬಿ ಕೆ ಗಂಗಾಧರ್ ಅವರು ರಮ್ಯಾ ಅವರಿಗೆ ಟೈಟಲ್ ವರ್ಗಾವಣೆ ಮಾಡಿದ್ದಾರೆ.





GIPHY App Key not set. Please check settings