ದಕ್ಷಿಣ ಕನ್ನಡ: ಸೌಜನ್ಯ ಪರ ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿಗೆ ಹೈಕೋರ್ಟ್ ಕೊಂಚ ರಿಲೀಫ್ ನೀಡಿದೆ. ಬೆಳ್ತಂಗಡಿಯಲ್ಲಿ ಮಹೇಶ್ ತಿಮರೋಡಿ ಇರಬಾರದು ಅಂತ ರಾಯಚೂರಿಗೆ ಗಡಿಪಾರು ಮಾಡಲಾಗಿತ್ತು. ಹೀಗಾಗಿ ತಿಮರೋಡಿ ಕೂಡ ಬೆಳ್ತಂಗಡಿ ಬಿಟ್ಟು ರಾಯಚೂರಿಗೆ ಹೋಗಬೇಕಾಗಿತ್ತು. ಅದಕ್ಕೆ ಈಗ ರಿಲೀಫ್ ಸಿಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿತ್ತು. ಬೆಳ್ತಂಗಡಿ ಉಪವಿಭಾಗಾಧಿಕಾರಿ ಆದೆರಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಹೇಶ್ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಆ ಸಂಬಂಧ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್, ಉಪ ವಿಭಾಗಾಧಿಕಾರಿಯ ಆದೇಶಕ್ಕೆ ತಡೆ ನೀಡಿದೆ. ಅಕ್ಟೋಬರ್ 8ರ ವರೆಗೆ ಉಪ ವಿಭಾಗಾಧಿಕಾರಿಯ ಆದೇಶಕ್ಕೆ ತಡೆ ನೀಡಿದೆ.
ಸದ್ಯ ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅರ್ಜಿ ವಿಚಾರಣೆ ನಡೆಸಿ, ನಂತರ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ. ಸದ್ಯ ತಿಮರೋಡಿಗೆ ರಾಯಚೂರಿಗೆ ಹೋಗುವ ವಿಚಾರಕ್ಕೆ ರಿಲೀಫ್ ಸಿಕ್ಕಿದೆ. ಸೌಜನ್ಯ ಕೇಸ್ ವಿಚಾರವಾಗಿ ಅಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಸದ್ದು ಮಾಡಿದ ಧರ್ಮಸ್ಥಳ ಬುರುಡೆ ಕೇಸಲ್ಲೂ ಮಹೇಶ್ ತಿಮರೋಡಿಯನ್ನ ತನಿಖೆ ಮಾಡಲಾಗಿತ್ತು. ಚಿನ್ನಯ್ಯನಿಗೆ ಮಹೇಶ್ ತಿಮರೋಡಿಯೇ ಆಶ್ರಯ ನೀಡಿದ್ದರು ಎಂಬೆಲ್ಲಾ ಆರೋಪಗಳು ಕೇಳಿ ಬಂದಿದ್ದವು. ಇದೆಲ್ಲಾ ಬೆಳವಣಿಗೆಯ ನಡುವೆ ಮಹೇಶ್ ತಿಮರೋಡಿಯನ್ನ ಬೆಳ್ತಂಗಡಿ ಉಪ ವಿಭಾಗದ ಅಧಿಕಾರಿ ರಾಯಚೂರಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಹೈಕೋರ್ಟ್ ಈಗ ಆ ಆದೇಶಕ್ಕೆ ತಡೆ ನೀಡಿದೆ. ಸದ್ಯಕ್ಕೆ ಬೆಳ್ತಂಗಡಿಯಲ್ಲಿಯೇ ಮಹೇಶ್ ತಿಮರೋಡಿ ಇರಲಿದ್ದಾರೆ.
