ಬೆಂಗಳೂರು: ಎಐ ಆಂಧ್ರ ಪಾಲಾದ ಹಿನ್ನಲೆ ಎಲ್ಲರೂ ಆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ಹೆಚ್ಡಿಕೆ ಫ್ಯಾಕ್ಟರಿ ತೆರೆಯಲಿ ಎಲ್ಲದಕ್ಕೂ ಅನುಮತಿ ಕೊಡ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಆ ಮಾತಿಗೆ ಇದೀಗ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ವಿರುದ್ಧ ತಿರುಗೇಟು ನೀಡಿದ್ದಾರೆ.
ಇವರ ಯೋಗ್ಯತೆಗೆ ಗುಂಡಿ ಮುಚ್ಚುವುದಕ್ಕೆ ಆಗ್ತಿಲ್ಲ, ನಾನ್ಯಾಕೆ ಅವರ ಜೊತೆಗೆ ಮಾತನಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ. ಡಿಕೆ ಎಷ್ಟು ಕಾರ್ಖಾನೆಯನ್ನ ತಂದಿದ್ದಾರೆ. ಎಷ್ಟು ಸೊಸೈಟಿಯನ್ನು ನುಂಗಿದ್ದಾರೆ. ಧಾರವಾಹಿ ಥರ ಪಟ್ಟಿಯನ್ನ ಬಿಡ್ತೇನೆ ಅಂತ ಸವಾಲು ಹಾಕಿದ್ದಾರೆ. ಜೊತೆಗೆ ಕೇಂದ್ರದಿಂದ ನಾನ್ಯಾಕೆ ಅನುದಾನವನ್ನ ಕೇಳಬೇಕು. ಜನ 135 ಸ್ಥಾನ ಕೊಟ್ಟಿರುವುದು ನಿಮಗೆ. ನಾನ್ಯಾಕೆ ಕೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಇವರ ಜೊತೆಗೆ ಸರ್ಕಾರ ಮಾಡಿದ್ದೆ. 9 ಇಂಡಸ್ಟ್ರಿಯಲ್ ಕ್ಲಸ್ಟರ್ ಗಳನ್ನ ಮಾಡಬೇಕು ಅಂತ ನಿರ್ಧಾರ ತೆಗೆದುಕೊಂಡೆ. ಕಾಂಪೀಟ್ ವಿತ್ ಚೈನಾ ಅಂತ ಕಾರ್ಯಕ್ರಮ, ಕಲಬುರಗಿ, ಬೀದರ್, ಕೊಪ್ಪಳ, ಚಿತ್ರದುರ್ಗ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ಕ್ಲಸ್ಟರ್ ಗಳನ್ನ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆ. ಕೊಪ್ಪಳದಲ್ಲಿ ಏನೋ ಮಾಡಿದ್ದಾರೆ. ಅದನ್ನ ಹೊರತುಪಡಿಸಿ ಇನ್ನ್ಯಾವುದು ಉದ್ಧಾರ ಆಗಿಲ್ಲ. ಆದ್ರೆ ನಮ್ಮ ಸರ್ಕಾರ ತೆಗೆದ್ರಿ. ಐದು ವರ್ಷ ಸರ್ಕಾರ ನಮಗೆ ಕೊಟ್ಟಿದ್ದರೆ ನಿಮಗೆ ಗೊತ್ತಾಗ್ತಾ ಇತ್ತು. ಮುಂದಿನ ಚುನಾವಣೆಯಲ್ಲಿ ನಮ್ಮದೆ ಸರ್ಕಾರ ಬರುತ್ತೆ. ನಿಮ್ಮನ್ನ ಉಳಿಸುವಂತಹ ಜವಬ್ದಾರಿ ನಮ್ಮದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯದ ಜನತೆಗೆ ಭರವಸೆಯನ್ನ ನೀಡಿದ್ದಾರೆ.






