ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಬಾರೀ ಸದ್ದು ಮಾಡ್ತಾ ಇದೆ. ಹನಿಟ್ರ್ಯಾಪ್ ಮಾಡಲು ಬಂದ ನೀಲಿ ಸುಂದರಿ ಬಗ್ಗೆ ಈಗಾಗಲೇ ಸಚಿವ ಕೆ.ಎನ್.ರಾಜಣ್ಣ ದೂರು ಕೂಡ ನೀಡಿದ್ದಾರೆ. ಇದೀಗ ದೊಡ್ಡ ಬೆಳವಣಿಗೆಯೊಂದು ಹನಿಟ್ರ್ಯಾಪ್ ಪ್ರಕರಣದಲ್ಲಿ ನಡೆದಿದೆ. ಅದುವೆ ಕೋಪ ಮರೆತು ದಳಪತಿಗಳು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.

ಹೌದು, ಸದನದಲ್ಲಿಯೇ ಈ ಸಂಬಂಧ ರಾಜಣ್ಣ ಅವರ ಬಳಿ ರೇವಣ್ಣ ಅವರು ಮಾತುಕತೆ ನಡೆಸಿದ್ದರು. ಇದೀಗ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಹಾಗೆ ನೋಡಿದ್ರೆ ರಾಜಣ್ಣ ಹಾಗೂ ದೇವೇಗೌಡತ ಕುಟುಂಬದ ನಡುವೆ ಜಿದ್ದಾಜಿದ್ದು ಹಲವು ವರ್ಷಗಳಿಂದಾನೂ ಇದೆ. ಈ ಜಿದ್ದಾಜಿದ್ದಿನ ರಾಜಕೀಯ 2008ರ ಮಧುಗಿರಿ ಉಪಚುನಾವಣೆಯಲ್ಲಿಯೇ ಬಹಿರಂಗವಾಗಿತ್ತು. ಅಂದು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕೆ.ಎನ್.ರಾಜಣ್ಣ ಸೋಲಿಸಿದ್ದರು. ಬಳಿಕ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ದೇವೇಗೌಡರ ವಿರುದ್ಧ ರಾಜಣ್ಣ ವಾಗ್ದಾಳಿ ನಡೆಸಿದ್ದರು. ದೇವೇಗೌಡರ ವಿರುದ್ಧ ಕೀಳುಮಟ್ಟದ ಪದ ಬಳಸಿ, ದೇವೇಗೌಡರ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ನೋಡಿದ್ರೆ ಅದೇ ದಳಪತಿಗಳು ದ್ವೇಷ ಮರೆತು ಒಂದಾಂತೆ ಕಾಣಿಸ್ತಾ ಇದಾರೆ.

ವಿಧಾನಸಭೆಯಲ್ಲಿ ಮಾತಾಡುವಾಗ ಕೆ.ಎನ್.ರಾಜಣ್ಣ ಅವರು ರೇವಣ್ಣ ಫ್ಯಾಮಿಲಿಯ ಪರವಾಗಿ ಮಾತನಾಡಿದ್ದರು. ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರ ಬಗ್ಗೆ ಮಾತನಾಡಿದ್ದರು. ಹೀಗಾಗಿ ಹೆಚ್.ಡಿ.ರೇವಣ್ಣ ಅವರು ಇದೀಗ ರಾಜಣ್ಣ ಪರವಾಗಿ ಬ್ಯಾಟ್ ಬೀಸಿದ್ದಾರೆ. ಜೆಡಿಎಸ್ ನಾಯಕರು ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಪಟ್ಟು ಹಿಡಿದಿದ್ದಾರೆ.

